ಧಾರವಾಡ: ಕಲಘಟಗಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಪಟ್ಟಣದ ತಾಲೂಕ ಪಂಚಾಯತ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಅಧಿಕಾರಿಗಳ ಮೇಲೆ ಜವಾಬ್ದಾರಿ ಇಟ್ಟು ಸರ್ಕಾರ ಆಡಳಿತ ನಡೆಸುತ್ತಿದೆ. ನೀವು ಯಾರಾದರೂ ಒಂದು ಗ್ರಾಮಕ್ಕಾದರೂ ಭೇಟಿ ನೀಡಿದ್ದೀರಾ..? ಎಂದು ಪ್ರಶ್ನಿಸಿದರು. ನಿಮ್ಮಂತ ಅಧಿಕಾರಿಗಳಿಂದ ಕ್ಷೇತ್ರದಲ್ಲಿ ನನ್ನ ಹೆಸರು ಕೆಡಿಸುತ್ತಿದ್ದೀರಿ ಇದು ನಿಮಗೆ ಕೊನೆ ಎಚ್ಚರಿಕೆ ಎಂದರು.
ಟ್ಯಾಕ್ಸ್ ಕಟ್ಟುವರಿಗೆ ಕಾರ್ಡ್ ಕೊಡಬೇಕಾ..? – ರೇಷನ್ ಕಾರ್ಡ್ ರದ್ದತಿ ಬಗ್ಗೆ ಸಿಎಂ ಹೇಳಿದಿಷ್ಟು
ಇನ್ನೂ ಇದೇ ವೇಳೆ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಯಾರನ್ನು ಕೇಳಿ ಅರ್ಜಿಗಳನ್ನು ರಿಜೆಕ್ಟ್ ಮಾಡುತ್ತೀರಿ..? ನನ್ನ ಗಮನಕ್ಕೆ ತರದೇ ಯಾವ ಅರ್ಜಿಯನ್ನು ರಿಜೆಕ್ಟ್ ಮಾಡಬೇಡಿ. ಇದರಲ್ಲಿ ಅಜ್ಜ ಮುತ್ತಜ್ಜ ಕಾಲದಿಂದ ಸಾಗುವಳಿ ಮಾಡುತ್ತಿರುವ ರೈತರು ಇರುತ್ತಾರೆ. ಬಗರ ಹುಕುಂ 1521 ಅರ್ಜಿಗಳನ್ನು ಸರ್ವೇ ಮಾಡಿ ವರದಿ ಒಪ್ಪಿಸಿರಿ. ಉಪ ಗ್ರಾಮಗಳ ಕುರಿತು ಸಂಪೂರ್ಣ ದಾಖಲೆಗಳನ್ನು ಪೂರ್ಣಗೊಳಿಸಿ ಎಂದು ತಹಶೀಲ್ದಾರ ವೀರೇಶ ಮುಳಗುಂದಮಠ ಅವರಿಗೆ ತಾಕೀತು ಮಾಡಿದರು. ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಿಗಿಗಟ್ಟಿ ತಾಂಡಾದಲ್ಲಿ ಚರಂಡಿ ನೀರು ಮನೆ ಒಳಗೆ ಬರುತ್ತಿದ್ದು ಕಾಲುವೆ ನಿರ್ಮಾಣದ ಬಗ್ಗೆ ಪಿಡಿಒ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ದೂರು ಬಂತು. ಆಗ ಮುತ್ತಗಿ ಪಿಡಿಒ ಅವರಿಗೆ ಕೇಳಿದಾಗ ನನ್ನ ಗಮನಕ್ಕೆ ಇದು ಬಂದಿಲ್ಲ ನಾನು ಸರಿಪಡಿಸುತ್ತೇನೆಂದು ಸಾಹೇಬರಿಗೆ ಪಿಡಿಓ ಹೆಳಿದರು.