ಬಾಗಲಕೋಟೆ: ಟ್ಯಾಕ್ಸ್ ಕಟ್ಟುವರಿಗೆ, ಸರ್ಕಾರಿ ನೌಕರರಿಗೆ ಬಿಪಿಎಲ್ ಕಾರ್ಡ್ ಕೊಡಬೇಕಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರೇಷನ್ ಕಾರ್ಡ್ ರದ್ದು ವಿಚಾರವಾಗಿ ಪ್ರಶ್ನಿಸಿದ್ದ ಪತ್ರಕರ್ತರಿಗೆ ಸಿಟ್ಟಿನಿಂದಲೇ ಉತ್ತರ ಕೊಟ್ಟರು.
ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲಯ್ಯ.. ಏ ಥು.. ಯಾರು ಅರ್ಹರಿದ್ದಾರೆ ಅವರಿಗೆ ಕೊಟ್ಟೆ ಕೊಡ್ತೇವೆ. ಯಾರು ಅನರ್ಹರಿದ್ದಾರೆ ಅವರನ್ನು ತೆಗೆದು ಹಾಕ್ತೀವಿ. ಟ್ಯಾಕ್ಸ್ ಕಟ್ಟವವರಿಗೆ, ಸರ್ಕಾರಿ ನೌಕರರಿಗೆ ಕೊಡಬೇಕಾ ಎಂದು ಮಾಧ್ಯಮದವರಿಗೆ ಮರುಪ್ರಶ್ನೆ ಹಾಕಿದ್ರು. ಟ್ಯಾಕ್ಸ್ ಕಟ್ಟುವವರಿಗೆ, ಸರ್ಕಾರಿ ನೌಕರರಿಗೆ ಬಿಪಿಎಲ್ ಕಾರ್ಡ್ ಇದ್ದರೆ ಅದನ್ನ ಎಪಿಎಲ್ ಮಾಡ್ತೇವೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ. ಅರ್ಹರಿದ್ದರೆ ಯಾರಿಗೂ ತಪ್ಪಿಸಲ್ಲ ಎಂದು ಸ್ಪಷ್ಟನೆ ನೀಡಿದರು.