ಭಾರತದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ಭಾರತೀಯ ಆಟಗಾರ ಶಮಿ ತಮ್ಮ ವಯಸ್ಸನ್ನು ಮರೆಮಾಚಿದ್ದಾರೆಂದು ಮೋಹನ್ ಕೃಷ್ಣ ಎಂಬಾತ ಆರೋಪಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಮಿ ಅವರ ಡ್ರೈವಿಂಗ್ ಲೈಸೆನ್ಸ್ ಫೋಟೋವನ್ನು ಸಹ ಶೇರ್ ಮಾಡಿದ್ದಾರೆ. ಇದರಲ್ಲಿ ಶೇರ್ ಮಾಡಿರುವ ಡ್ರೈವಿಂಗ್ ಲೈಸೆನ್ಸ್ ಪ್ರಕಾರ ಮೊಹಮ್ಮದ ಶಮಿ ಅವರು ವಯಸ್ಸು 42 ವರ್ಷ. ಆದರೆ ಅಧಿಕೃತವಾಗಿ ಪ್ರಸ್ತಾಪಿಸಿರುವ ವಯಸ್ಸು 34 ವರ್ಷವಾಗಿದೆ. ಹೀಗಾಗಿ ಶಮಿ ಅವರು ತಮ್ಮ ವಯಸ್ಸನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ತನಿಖೆ ಮಾಡುವಂತೆ ಬಿಸಿಸಿಐಗೆ ಸಹ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 60 ಪರ್ಸೆಂಟ್ ಕಮೀಷನ್ ಸರ್ಕಾರ – ವಿಪಕ್ಷ ನಾಯಕ ಆರ್. ಅಶೋಕ್ ಆರೋಪ
ಒಂದು ವೇಳೆ ಬಿಸಿಸಿಐ ಈ ಮನವಿ ಮನ್ನಿಸಿ ತನಿಖೆ ನಡೆಸಿ, ಆರೋಪ ಸಾಬೀತಾದರೆ ಬ್ಯಾನ್ ಆಗುವ ಸಾಧ್ಯತೆ ಇದೆ. ಬಿಸಿಸಿಐ ನಿಯಮಗಳ ಪ್ರಕಾರ ವಯಸ್ಸನ್ನು ಮರೆಮಾಚುವುದು ಗಂಭೀರ ಆರೋಪವಾಗಿದೆ. ಕೆಲವೊಮ್ಮೆ ಅಂಡರ್- 19 ತಂಡದಲ್ಲಿ ಸ್ಥಾನ ಪಡೆಯಲು ಕೆಲ ಆಟಗಾರರು ತಮ್ಮ ವಯಸ್ಸನ್ನು ಕಡಿಮೆಮಾಡಿ ಘೋಷಿಸುತ್ತಾರೆ. ಹೀಗೆ ವಯಸ್ಸು ಬದಲಿಸಿ ಹಲವು ಆಟಗಾರರು ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಬಿಸಿಸಿಐ ಅಮಾನತಿನಂತಹ ಕಠಿಣ ಕ್ರಮ ಕೈಗೊಂಡಿದ್ದ ಪ್ರಕರಣಗಳೂ ಇವೆ.