ಕೋಲಾರ : ರಾಜ್ಯದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, 11 ಲಕ್ಷ ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಗೆ ಬದಲಾವಣೆ ಆಗ್ತಿದೆ. ಬದಲಾವಣೆಗೆ ಕೈ ಹಾಕಿರುವ ಸರ್ಕಾರದ ಬಗ್ಗೆ ಜನರು ಪ್ರಶ್ನೆ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲೂ ಅಕ್ಕಿ ಕಡಿತ ಮಾಡ್ತಿಲ್ಲ. ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾವಣೆ ಬಗ್ಗೆ ಯೋಚನೆ ಮಾಡಿದ್ದೀರಾ.. ಎಪಿಎಲ್ ಕಾರ್ಡ್ ನವರಿಗೆ ದುಡ್ಡು ಕೊಡಬೇಕಲ್ವಾ..?, ಸರ್ಕಾರದ ಮೇಲೆ ಹೊರೆ ತಪ್ಪಿಸಲು ಈ ರೀತಿ ಮಾಡ್ತಿದ್ದಾರೆ. ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ಕೊಡ್ತಿದ್ದಾರೆ. ಗ್ಯಾರಂಟಿ ಸ್ಕೀಮ್ ನಿಂದ ಸರ್ಕಾರಕ್ಕೆ ಏನೂ ಹೊರೆ ಇಲ್ಲ ಎಂದಿರುವ ಹೆಚ್ ಡಿಕೆ, ತೆರಿಗೆ ಹೆಚ್ಚಿಸಿ ಸಂಗ್ರಹ ಮಾಡಿರುವ ಹಣ ಏನಾಯ್ತು..? ಎಂದು ಪ್ರಶ್ನಿಸಿದ್ದಾರೆ. ಈಗ ರಾಜ್ಯ ಸರ್ಕಾರ 1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿದೆ ಎಂದರು.
ಇನ್ನೂ ಇದೇ ವೇಳೆ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧದ ಅರಣ್ಯ ಒತ್ತುವರಿ ಆರೋಪದ ಸರ್ವೇ ಸ್ಥಗಿತ ಕುರಿತು ಪ್ರತಿಕ್ರಿಯಿಸಿದ ಅವರು, ಕೋಲಾರ ಜಿಲ್ಲೆಯಲ್ಲಿ ಅಮಾಯಕ ರೈತರ ಭೂಮಿಯನ್ನು ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ತೆರವು ಮಾಡಿದ್ದಾರೆ. ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಖಾಲಿ ಮಾಡಿಸಿದ್ದಾರೆ. 126 ಎಕರೆ ಒತ್ತುವರಿ ಸರ್ವೇ ಬಗ್ಗೆ ಕೋರ್ಟ್ ಸೂಚನೆ ನೀಡಿದೆ. ಹಾಗಾದ್ರೆ ಬಡವರಿಗೆ ಒಂದೂ ನ್ಯಾಯ ಇವರಿಗೆ ಒಂದೂ ನ್ಯಾಯನಾ ?. ಇದೆ ತಿಂಗಳ 6 ನೇ ತಾರೀಖು ಸರ್ವೇ ಮಾಡಲು ನಿಗದಿಯಾಗಿದ್ದು ಏನಾಯ್ತು. ಅದ್ಯಾವುದೋ ಹೆಚ್ ಎಂಟಿ ಬಗ್ಗೆ ಇಡ್ಕೊಂಡು ಅರಣ್ಯ ಮಂತ್ರಿ ಮಾತಾಡುತ್ತಿದ್ದಾರೆ. ದೇಶಕ್ಕೆ ಬುದ್ದಿ ಹೇಳೋರು ಇವರಿಬ್ಬರೂ ಅಲ್ವೇ ಅಂತ ಸಚಿವ ಕೃಷ್ಣಭೈರೆಗೌಡ ಹಾಗೂ ರಮೇಶ್ ಕುಮಾರ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.