ಬೆಂಗಳೂರು:- ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯ ದೇವಿ ವಿಗ್ರಹ ವಿರೂಪ ಕೇಸ್ ಗೆ ಸಂಬಂಧಿಸಿದಂತೆ ಸಿಸಿಟಿವಿ ಪರಿಶೀಲಿಸಿ ಆರೋಪಿ ಪತ್ತೆ ಮಾಡಿದ ಪೊಲೀಸ್ರೇ ಶಾಕ್ ಆಗಿದ್ದಾರೆ.
ಅಪ್ರಾಪ್ತ ಮಾಡಿದ ಅವಾಂತರಕ್ಕೆ ಪೊಲೀಸ್ರು ಹೈರಾಣಾಗಿದ್ದಾರೆ. ಎಸ್ ಎಸ್ ಎಲ್ ಸಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ್ದಾನೆ. ದೈವ ಭಕ್ತನಾಗಿದ್ದ ಅಪ್ರಾಪ್ತ ಬಾಲಕ ಭುವನೇಶ್ವರಿ ದೇವಿಯನ್ನ ನಂಬಿದ್ದನಂತೆ. ಆದ್ರೆ ಎಸ್ ಎಸ್ ಎಲ್ಸಿ ಯಲ್ಲಿ ಫೇಲ್ ಆಗಿದ್ದಕ್ಕೆ ದೇವರ ಮೇಲೆ ಕೋಪಗೊಂಡು ವಿಗ್ರಹ ವಿರೂಪ ಮಾಡಿರುವ ಆರೋಪ ಕೇಳಿ ಬಂದಿದೆ.
ಅಪ್ರಾಪ್ತ ಬಾಲಕ ತಿಪ್ಪಸಂದ್ರದ ನಿವಾಸಿಯೇ ಆಗಿದ್ದು ವಿಚಿತ್ರ ವರ್ತನೆ ತೋರಿದ್ದಾನೆ. ಮಧ್ಯರಾತ್ರಿ ಓಡಾಡೋದು, ಒಬ್ಬೊಬ್ಬನೇ ಮಾತಾಡೋದು ಮಾಡ್ತಿದ್ದ. ಕೇವಲ ದೇವರ ಮೇಲಿನ ಕೋಪಕ್ಕೆ ಮಾಡಿದ್ನಾ ಅಥವಾ ಬೇರೆ ಕಾರಣವಿದ್ಯಾ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಸದ್ಯ ವಶಕ್ಕೆ ಪಡೆದಿರೋ ಅಪ್ರಾಪ್ತ ಬಾಲಕನನ್ನು ಪೊಲೀಸರು ವಿಚಾರಣೆ ಮಾಡ್ತಿದ್ದಾರೆ. ಹಳೇ ದ್ವೇಷಕ್ಕೆ ಯಾರೋ ಉದ್ದೇಶಪೂರ್ವಕವಾಗಿ ಮಾಡಿಸಿದ್ದಾರೆಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಟೀ ಶರ್ಟ್ ನಲ್ಲಿ ಮುಖ ಮುಚ್ಚಿಕೊಂಡು ವಿಗ್ರಹ ವಿರೂಪಗೊಳಿಸಲಾಗಿದೆ. ಹೀಗಾಗಿ ಸಾಕಷ್ಟು ಅನುಮನಾವಿದ್ದು, ಎರಡು ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಗುರುವಾರ ರಾತ್ರಿ ತಿಪ್ಪಸಂದ್ರದ ಸರ್ಕಲ್ ನಲ್ಲಿದ್ದ ಲಕ್ಷ್ಮಿ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ್ದಾನೆ.
ಸಿಸಿಟಿವಿಯಲ್ಲಿ ಅಪ್ರಾಪ್ತ ಬಾಲಕನ ಕೃತ್ಯ ಸೆರೆಯಾಗಿದೆ.