ಮಸಾಲೆ ಪದಾರ್ಥಗಳು ಇದು ಭಾರತೀಯ ಪಾಕಪದ್ಧತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಆದರೆ, ಒಂದಾನೊಂದು ಕಾಲದಲ್ಲಿ ಮಹಿಳೆಯರು ಮನೆಯಲ್ಲಿಯೇ ಅಡುಗೆಗೆ ಬೇಕಾಗುವ ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸುತ್ತಿದ್ದರು. ಆದರೆ, ಇಂದಿನ ಬ್ಯುಸಿ ಲೈಫ್ನಲ್ಲಿ ಮನೆಯಲ್ಲಿ ಸಿದ್ಧಪಡಿಸಲು ತಾಳ್ಮೆ ಇಲ್ಲದಿದ್ದರೆ ಹೊರಗೆ ಕೊಳ್ಳುವುದು ಸಾಮಾನ್ಯ.
Hot Water: ಬಿಸಿ ನೀರನ್ನು ಬೆಳಗ್ಗೆ ಕುಡಿದ್ರೆ ಒಳ್ಳೆಯದಾ? ರಾತ್ರಿ ಮಲಗುವ ವೇಳೆ ಕುಡಿದ್ರೆ ಒಳ್ಳೆಯದಾ!?
ಅದರಲ್ಲಿ ಅರಿಸಿನ. ಮಾರುಕಟ್ಟೆಯಿಂದ ತಂದ ಅರಶಿನ ಅಸಲಿಯೇ, ನಕಲಿಯೇ ಎಂದು ಪತ್ತೆಹಚ್ಚಲು ಈ ಕೆಲವು ವಿಧಾನಗಳನ್ನು ಅನುಸರಿಸಬಹುದು.
ಅರಿಶಿನವು ಅಸಲಿಯೇ ನಕಲಿಯೇ ಎಂದು ಬಣ್ಣಗಳ ಮೂಲಕ ಪರೀಕ್ಷಿಸಬಹುದು. ಶುದ್ಧ ಅರಿಶಿನವು ಸಾಮಾನ್ಯವಾಗಿ ಚಿನ್ನದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಅರಶಿನದ ಬಣ್ಣವು ಮಸುಕಾಗಿದ್ದು, ಮಂದ ಹಳದಿ ಬಣ್ಣದಲ್ಲಿದ್ದರೆ ಅದು ನಕಲಿ ಎಂದರ್ಥ.
ಒಂದು ಚಿಟಿಕೆ ಅರಿಶಿನ ಪುಡಿಯನ್ನು ಅಂಗೈಯಲ್ಲಿ ಹೆಬ್ಬೆರಳಿನಿಂದ ಉಜ್ಜಿಕೊಳ್ಳಿ. ಅರಿಶಿನವು ಶುದ್ಧವಾಗಿದ್ದರೆ, ಕೈಯಲ್ಲಿ ಹಳದಿ ಬಣ್ಣವು ಉಳಿಯುತ್ತದೆ ಹಾಗೂ ಕೈಗೆ ಅರಶಿನವು ಅಂಟಿಕೊಳ್ಳುತ್ತದೆ. ಅರಶಿನವು ಕಲಬೆರಕೆಯಾಗಿದ್ದರೆ ಬಣ್ಣ ಬಿಡುವುದಿಲ್ಲ, ಪುಡಿಯು ಕೈಯಿಂದ ಉದುರಿ ಹೋಗುತ್ತದೆ.
ಒಂದು ಚಮಚ ಅರಿಶಿನವನ್ನು ಒಂದು ಲೋಟ ನೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಕರಗಿದ ಬಳಿಕ ತಳಭಾಗದಲ್ಲಿ ಅರಿಶಿನದ ಕಣಗಳು ಉಳಿದುಕೊಂಡಿದ್ದರೆ, ಅದು ನಕಲಿ ಎಂದರ್ಥ. ಕಲಬೆರಕೆ ರಹಿತ ಅರಿಶಿನವಾಗಿದ್ದರೆ ನೀರಿನಲ್ಲಿ ಕರಗುವುದಿಲ್ಲ, ಬದಲಾಗಿ ನೀರಿನಲ್ಲಿ ತೇಲುತ್ತದೆ.
ಅರಶಿನ ಅಸಲಿಯೇ ನಕಲಿಯೇ ಎಂದು ಗುರುತಿಸಲು ಸ್ವಲ್ಪ ಹೈಡ್ರೋಕ್ಲೋರಿಕ್ ಆಮ್ಲವನ್ನು ಬೆರೆಸಿ ಅರಶಿನವನ್ನು ನೀರಿಗೆ ಹಾಕಬೇಕು. ಆ ವೇಳೆಯಲ್ಲಿ ಅರಿಶಿನದ ಬಣ್ಣವು ನೀಲಿ, ನೇರಳೆ, ಗುಲಾಬಿ ಬಣ್ಣಕ್ಕೆ ತಿರುಗಿದರೆ, ಅರಶಿನ ಶುದ್ಧವಾಗಿಲ್ಲ ಎಂದು ಅರ್ಥ ಮಾಡಿಕೊಳ್ಳಿ.