ಬೆಂಗಳೂರು:- ಕಾರಿನೊಳಗೆ ವ್ಯಕ್ತಿ ಅನುಮಾನಾಸ್ಪದ ಸಾವು ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಸಾಲ ಬಾಧೆಯಿಂದ ತಾನೇ ಬೆಂಕಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ.
BBK11: ಕಿಚ್ಚನ ಪಂಚಾಯಿತಿಯಲ್ಲಿ ವರ್ತೂರು ಸಂತೋಷ್ ಕೊಂಡಾಡಿದ ಕಿಚ್ಚ ಸುದೀಪ್! ಕಾರಣ!?
42 ವರ್ಷದ ಪ್ರದೀಪ್ ಮೃತ ಉದ್ಯಮಿ. ಬಸವನಗುಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಮಧ್ಯಾಹ್ನ ಬ್ಯಾಡರಹಳ್ಳಿ ಬಂದಿರುವ ಪ್ರದೀಪ್, ಅನ್ನಪೂರ್ಣೇಶ್ವರಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ 4 ಲೀಟರ್ ಪೆಟ್ರೋಲ್ ಖರೀದಿಸಿದ್ದರು. ನಂತರ ಮುದ್ದಿನಪಾಳ್ಯದ ನಿರ್ಜನ ಪ್ರದೇಶಕ್ಕೆ ಬಂದು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪೆಟ್ರೋಲ್ ಬಂಕ್ನಲ್ಲಿ ಸ್ಕೋಡಾ ಕಾರ್ನಲ್ಲಿ ಬಂದು ಬಾಟೆಲ್ ನೀಡಿ ಪೆಟ್ರೋಲ್ ಹಾಕಿಸಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇಲ್ನೋಟಕ್ಕೆ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪ್ರದೀಪ್ ಪತ್ನಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.