ಬಿಗ್ ಬಾಸ್ ಸೀಸನ್ 11 ರ ಸಧ್ಯ ಶನಿವಾರ, ಭಾನುವಾರದ ಕಿಚ್ಚನ ಪಂಚಾಯಿತಿ ನಡೆಯುತ್ತಿದ್ದು, ಈ ವೇಳೆ ಚೈತ್ರಾ ಮೇಲೆ ಗರಂ ಆಗಿರುವ ಕಿಚ್ಚ, ವರ್ತೂರು ಸಂತೋಷ್ ರನ್ನು ಹೊಗಳಿದ್ದಾರೆ.
ಬಿಪಿಎಲ್ ಫಲಾನುಭವಿಗಳಿಗೆ ಶಾಕ್: ಕಾರ್ಡ್ ರದ್ಧತಿ ಜೊತೆಗೆ ಸರ್ಕಾರಿ ಸೌಕರ್ಯಗಳಿಗೂ ಬ್ರೇಕ್?
ಅನಾರೋಗ್ಯ ನೆಪ ಒಡ್ಡಿ ಆಸ್ಪತ್ರೆಗೆ ಹೋಗಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಯಲ್ಲಿ ದಿನ ಕಳೆದಿದ್ದರು. ಮಾರನೇಯ ದಿನ ಬಿಗ್ಬಾಸ್ಗೆ ಮರಳಿದಾಗ ಅವರು ಇತರೆ ಸ್ಪರ್ಧಿಗಳ ಬಗ್ಗೆ ಹೊರಗೆ ಏನು ಅಭಿಪ್ರಾಯ ಇದೆ ಎಂಬುದನ್ನು ಹೇಳಿದರು. ಉಗ್ರಂ ಮಂಜು, ಧನರಾಜ್, ಹನುಮಂತು, ಮೋಕ್ಷಿತಾ, ತ್ರಿವಿಕ್ರಮ್, ಶಿಶಿರ್ ಇನ್ನಿತರೆ ಎಲ್ಲರ ಬಗ್ಗೆ ಹೊರಗೆ ಏನು ಅಭಿಪ್ರಾಯ ಇದೆ ಎಂದು ಹೇಳಿದರು. ಮಾತ್ರವಲ್ಲದೆ, ಅದನ್ನೆಲ್ಲ ಕತೆಗಳ ರೂಪದಲ್ಲಿ ಹೇಳಿದರು. ಇದು ಸುದೀಪ್ಗೆ ತೀವ್ರ ಅಸಮಾಧಾನ ತರಿಸಿತ್ತು.
ಇದರ ಬಗ್ಗೆ ಮಾತನಾಡುತ್ತಾ, ಚೈತ್ರಾ ಕುಂದಾಪುರ ಹಾಗೂ ಮನೆಯ ಇತರರಿಗೆ ಬುದ್ಧಿವಾದ ಹೇಳುತ್ತಿದ್ದ ಸುದೀಪ್, ಮಾತಿನ ಮಧ್ಯದಲ್ಲಿ ವರ್ತೂರು ಸಂತೋಷ್ ಅವರನ್ನು ನೆನಪು ಮಾಡಿಕೊಂಡರು.
ಹಿಂದಿನ ಸೀಸನ್ನಲ್ಲಿ ಒಬ್ಬ ಸ್ಪರ್ಧಿ ಇದ್ದರು ವರ್ತೂರು ಸಂತೋಷ್ ಎಂದು ಅವರ ಹೆಸರು, ಅವರು ಹೊರಗೆ ಹೋಗಿ ಒಂದು ವಾರ ಪೂರ್ತಿ ಜೈಲಿನಲ್ಲಿದ್ದು ವಾಪಸ್ ಬಂದರು. ಆದರೆ ವಾಪಸ್ ಬಂದ ಮೇಲೆ ಒಬ್ಬೇ ಒಬ್ಬ ವ್ಯಕ್ತಿಗೆ ಸಹ ಹೊರಗೆ ಏನಾಯ್ತು ಎಂದು ಹೇಳಲಿಲ್ಲ ಎಂದರು. ಅದು ನಿಯಮಕ್ಕೆ ಕೊಡುವ ಗೌರವ. ಜಿನ್ಯೂನ್ ಆಗಿರಬೇಕು’ ಎಂದು ಕೊಂಡಾಡಿದರು ಸುದೀಪ್.
ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಜೈಲಿಗೆ ಹೋದರು. ಜೈಲಿನಿಂದ ನೇರವಾಗಿ ಬಿಗ್ಬಾಸ್ ಮನೆಗೆ ಬಂದರು. ಫಿನಾಲೆ ವರೆಗೆ ವರ್ತೂರು ಸಂತೋಷ್ ಬಿಗ್ಬಾಸ್ ಮನೆಯಲ್ಲಿ ಇದ್ದರು.