ಹುಬ್ಬಳ್ಳಿ:- ರೇಣುಕಾಚಾರ್ಯ ಯಾರು ಅಂತಾನೇ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.
ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪಾದಯಾತ್ರೆ ಮಾಡಲು ಹೊರಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ನಾಯಕರು ತಡೆಯಬೇಕು. ಇಲ್ಲದಿದ್ದರೆ ನಾವು ಕೂಡ ಪ್ರತ್ಯೇಕ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ್, ರೇಣುಕಾಚಾರ್ಯ ಯಾರು ಅಂತಾನೇ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಮೂರು ತಂಡ ಅಲ್ಲ, ಮೂವತ್ತು ತಂಡವನ್ನೇ ಮಾಡಿಕೊಳ್ಳಲಿ. ವಕ್ಫ್ ವಿಚಾರದಲ್ಲಿ ಬಿಜೆಪಿ ಕವಲು ಹಾದಿ ಹಿಡಿದಿದೆ ಎಂಬ ಕುರಿತು ಹೇಳುವುದಾದರೆ ನಮ್ಮದು ಒರಿಜಿನಲ್ ಹಾದಿ ಎಂದಿದ್ದಾರೆ. ನಮ್ಮದು ಕವಲು ಹಾದಿ ಅಲ್ಲ, ನಮ್ಮದು ಒರಿಜಿನಲ್ ದಾರಿ. ಕೆಲವರದು ಸೈಡ್ ರೋಡ್. ರಾಜ್ಯಾಧ್ಯಕ್ಷರೇ ಎಲ್ಲಿಗೂ ಹೋಗಿಲ್ಲ. ಆದರೆ, ನಮ್ಮ ಟೀಮ್ ಎಲ್ಲ ಜಿಲ್ಲೆಗೆ ಹೋಗಲಿದೆ ಎಂದಿದ್ದಾರೆ.
ಚಿಂತಾಮಣಿಯಲ್ಲಿ ಪೊಲೀಸರು ಗೂಂಡಾಗಿರಿ ಮಾಡಿದ್ದಾರೆ. ಜಮೀರ್ ಅಹಮ್ಮದ್, ಸಿದ್ದರಾಮಯ್ಯನವರು ಮುಸ್ಲಿಮರ ಪರ ನಿಂತರೆ ಮುಂದೆ ಇವರನ್ನು ರಸ್ತೆ ಮೇಲೆ ಓಡಾಡೋಕೆ ಬಿಡಲ್ಲ. ಹೀಗಾಗಿ, ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು. ಇನ್ನು ಸಿದ್ದರಾಮಯ್ಯನವರ ಆದೇಶ ಜಾರಿಯಾಗಿಲ್ಲ. ವಕ್ಫ್ ಸಂಪೂರ್ಣ ಹೋಗಬೇಕು. ಪಹಣಿ ಕ್ಲೀನ್ ಆಗಬೇಕು. ರೈತನಿಗೆ ಕ್ಲೀನ್ ಪಹಣಿ ಸಿಗಬೇಕು. ನಮ್ಮ ಮೇಲೆ ಕೇಸ್ ಹಾಕುವುದಾದರೆ ಹಾಕಲಿ. ಮುಂದೆ ನಮ್ಮ ಸರ್ಕಾರ ಬರುತ್ತದೆ, ಮೊದಲ ಕ್ಯಾಬಿನೆಟ್ ನಲ್ಲಿ ಎಲ್ಲ ಕೇಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.