ಹುಬ್ಬಳ್ಳಿ:- ಸಿದ್ದರಾಮಯ್ಯ ಹುಷಾರಾಗಿ, ಮುಂದೆ ನಿಮ್ಮ ಮೊಮ್ಮಕ್ಕಳನ್ನು ಮುಸ್ಲಿಂರ ಮನೆಯಲ್ಲಿ ಜೀತಕ್ಕಿಡಬೇಕಾಗುತ್ತೆ ಎಂದು ಅರವಿಂದ್ ಬೆಲ್ಲದ್ ಅವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
IPL 2025: ಹರಾಜಿನಲ್ಲಿ ಯಂಗ್ ಬೌಲರ್ ಮೇಲೆ ಕಣ್ಣಿಟ್ಟ RCB: ಪೈಪೋಟಿಯಲ್ಲಿ ಹಲವು ತಂಡಗಳು!
ವಕ್ಫ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಸಿಎಂ ಸಿದ್ದರಾಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ಬಳಿ ಇರೋದೆಲ್ಲವನ್ನು ತಾವೇ ಬರೆದುಕೊಡೊ ಸ್ಥಿತಿ ತಂದುಕೊಳ್ತಾರೆ. ತಮ್ಮ ಮಕ್ಕಳ ಸಬಂಧ ಸಿದ್ದರಾಮಯ್ಯ ದೊಡ್ಡ ಆಸ್ತಿ ಮಾಡಿದಾರೆ. ಹೀಗೆ ಮುಸ್ಲಿಮರ ಓಲೈಕೆ ಮಾಡ್ತಾ ಹೋದ್ರೆ ತಮ್ಮ ಮೊಮ್ಮಕ್ಕಳನ್ನು ಮುಸ್ಲಿಂರ ಮನೆಯಲ್ಲಿ ಜೀತಕ್ಕಿಡಬೇಕಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಧರ್ಮಧಾರಿತವಾಗಿ ಮುಸ್ಲಿಂರಿಗೆ ಮೀಸಲಾತಿ ಕೊಡಲು ಹೊರಟಿದ್ದಾರೆ. ಕಾನೂನಿನಲ್ಲಿ ಹಾಗೆ ಕೊಡೋಕೆ ಬರಲ್ಲ, ಜೊತೆಗೆ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡೋದಾಗಿ ಹೇಳ್ತಾರೆ, ಇದರ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಡುತ್ತೇವೆ. ಸಿಎಂ ಸ್ಥಾನ ಹೋಗುತ್ತೆ ಅಂತ ಗೊತ್ತಾಗಿ ಮನಬಂಧಂತೆ ನಿರ್ಧಾರಗಳನ್ನು ಕೈಗೊಳ್ತಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.