ನಿರುದ್ಯೋಗಿ ಯುವಕರಿಗೆ ಬಿಗ್ ಆಫರ್ ಸಿಕ್ಕಿದ್ದು, 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ ಲಕ್ಷ-ಲಕ್ಷ ಸಂಬಳ ಸಿಗಲಿದೆ.
ವಿಜಯೇಂದ್ರಗೆ ವಕ್ಫ್ ವಿರುದ್ಧ ಹೋರಾಟದ ಬಗ್ಗೆ ಕಾಳಜಿ ಇಲ್ಲ: ಯತ್ನಾಳ್!
ಮಹಿಳೆಯೊಬ್ಬಳು ತನ್ನನ್ನು ಗರ್ಭಧಾರಣೆ ಮಾಡುವ ಯಾವುದೇ ಪುರುಷನಿಗೆ 50 ಲಕ್ಷ ನೀಡುವ ಭರವಸೆ ನೀಡುತ್ತಿರುವುದು ಕಂಡು ಬಂದಿದೆ. ಅಲ್ಲದೆ ಮುಂಗಡವಾಗಿ 10 ಲಕ್ಷ ರೂ. ನೀಡುವುದಾಗಿ ಹೇಳುತ್ತಾಳೆ. ಯಾವುದೇ ಜನಾಂಗದ ಪುರುಷರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಅಂತಲೂ ಹೇಳಿದ್ದಾಳೆ. ಮತ್ತೊಂದು ವಿಡಿಯೋದಲ್ಲಿ ಮಹಿಳೆಯೊಬ್ಬಳು ‘ತನ್ನನ್ನು 3 ತಿಂಗಳಲ್ಲಿ ಗರ್ಭಿಣಿಯನ್ನಾಗಿ ಮಾಡಿದ್ರೆ 20 ಲಕ್ಷ ರೂ. ನೀಡುವುದಾಗಿ’ ಹೇಳಿದ್ದಾಳೆ.
ಇದು ಹರಿಯಾಣ, ಉತ್ತರಪ್ರದೇಶ ಸೇರಿ ಹಲವೆಡೆ ಇಂತಹ ಜಾಲವಿರುವುದು ಪತ್ತೆಯಾಗಿದೆ. ಇಂತಹದ್ದೇ ಘಟನೆಯೊಂದರಲ್ಲಿ ಬಿಹಾರದ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಆದರೂ ಇಂತಹ ಪೋಸ್ಟ್ಗಳು ಫೇಸ್ಬುಕ್ನಲ್ಲಿ ನಿರಂತರವಾಗಿ ಬರುತ್ತಲೇ ಇವೆ. ಇದು ಪುರುಷರು ವಿಶೇಷವಾಗಿ ಯುವಕರನ್ನು ಆರ್ಥಿಕವಾಗಿ ಶೋಷಣೆ ಮಾಡುವುದಲ್ಲದೇ ಅವರ ದೌರ್ಬಲ್ಯಗಳನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ, ಬಲಿಯಾಗಿಸುವ ಅಮಾನುಷ ಘಟನೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರು ಎಚ್ಚರ ವಹಿಸಬೇಕಿದೆ.
ಇನ್ನೂ ಹೊಸ ವಂಚನೆ ಜಾಲವು ಆಕರ್ಷಕ, ಸುಂದರವಾಗಿರುವ ಮಹಿಳೆಯರ ಫೋಟೋ ಕದ್ದು ಮಹಿಳೆಯರ ಹೆಸರಿನ ಅಕೌಂಟ್ನಿಂದ ಪೋಸ್ಟ್ ಹಾಕುತ್ತಾರೆ. ಆಫರ್ನಲ್ಲಿ ಶ್ರೀಮಂತ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ಹೊಂದಬಹುದು. ಜೊತೆಗೆ ದೊಡ್ಡ ಮೊತ್ತದ ಹಣ, ದೊಡ್ಡ ಉಡುಗೊರೆ ನೀಡುವ ಭರವಸೆ ನೀಡುತ್ತಾರೆ. ಹೀಗಾಗಿ ಇಂತವರಿಂದ ದೂರ ಇರಬೇಕಾಗಿದೆ.