ಬೆಂಗಳೂರು: ಆರ್.ಆರ್ ನಗರ ವಲಯದಲ್ಲಿ ನಕ್ಷೆ ಮಂಜೂರಾತಿಗಿಂತ ಹೆಚ್ಚುವರಿಯಾಗಿ ಅನಧಿಕೃತವಾಗಿ ನಿರ್ಮಿಸಿದ 2 ಅಂತಸ್ತುಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು. ವಲಯ ಆಯುಕ್ತರಾದ ಬಿ.ಸಿ ಸತೀಶ್ ನೇತೃತ್ವದಲ್ಲಿ ಹೆಮ್ಮಿಗೆ ಪುರ ವಾರ್ಡ್ ವ್ಯಾಪ್ತಿಯ ಬಾಲಾಜಿ ಹೆಚ್.ಬಿ.ಸಿ.ಎಸ್ ವಾಜರಹಳ್ಳಿಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ಕಟ್ಟಡ ಮಾಲೀಕರು ಪಾಲಿಕೆಯಿಂದ ನೆಲ ಮಹಡಿ ,ಮೊದಲನೇ ಹಾಗೂ ಎರಡನೇ ಮಹಡಿ ನಿರ್ಮಾಣ ಮಾಡಲು ಅನುಮತಿ ಪಡೆದಿದ್ದರು. ಆದರೆ ಸ್ವತ್ತಿನಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ಅನಧಿಕೃತವಾಗಿರುವ 3ನೇ ಮತ್ತು 4 ಅಂತಸ್ತುಗಳನ್ನು ನಿರ್ಮಾಣ ಮಾಡಿದ್ದರು. ಈ ಬಗ್ಗೆ ಕಟ್ಟಡ ಮಾಲೀಕರಿಗೆ ನಾಲ್ಕು ಬಾರಿ ನೋಟಿಸ್ ಗಳನ್ನು ಜಾರಿ ಮಾಡಿದರೂ ಸಹ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕಟ್ಟಡದ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸುವ ಬಗ್ಗೆ ಪಾಲಿಕೆಗೆ ಯಾವುದೇ ಮಾಹಿತಿ ಸಲ್ಲಿಸಿಲ್ಲವಾದ ಕಾರಣ ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ 2 ಮಹಡಿ ಹಾಗೂ ವ್ಯತಿರಿಕ್ತ ಭಾಗಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.