ಶಿವಮೊಗ್ಗ: ಕುಮಾರಸ್ವಾಮಿಗೆ ಕರಿಯಾ ಎಂಬ ಪದ ಬಳಸಿ ನಿಂಧಿಸಿದ ಸಚಿವ ಜಮೀರ್ ಅಹಮದ್ ರನ್ನು ಕೂಡಲೆ ಬಂಧಿಸಿ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಜಿಲ್ಲಾ ಜೆಡಿಎಸ್ ಇಂದು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿತು. ಈ ಕುರಿತು ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರದ್ಲಿ ಏನಿದೆ.
ಜಮೀರ್ ಅಹ್ಮದ್ ಕರ್ನಾಟಕ ಪ್ರದೇಶ ಜನತಾದಳದ ಅಧ್ಯಕ್ಷರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರ ವಿರುದ್ಧ ಅಸಭ್ಯ ಪದ ಬಳಸಿ ಮತ್ತು ವರ್ಣಭೇದ ನೀತಿ ಅನುಸರಿಸಿದ್ದಾರೆ. ಆ ಹಿನ್ನಲೆ ಸಚಿವ ಜಮೀರ್ ಅಹಮ್ಮದ್ ಖಾನ್ ರವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವ ಮೂಲಕ ಕಠಿಣ ಅವರಿಗೆ ಶಿಕ್ಷೆಯಾಗಬೇಕು.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹುಡುಗಿಯರು Googleನಲ್ಲಿ ಅತಿ ಹೆಚ್ಚು ಸರ್ಚ್ ಮಾಡೋದೇನು ಗೊತ್ತಾ..?
ಆದ್ದರಿಂದ ಗೌರವಾನ್ವಿತ ರಾಜ್ಯಪಾಲರು ಜಮೀರ್ ರ್ಅಹಮದ್ಖಾನ್ ರವರನ್ನು ಈ ತಕ್ಷಣದಿಂದ ವಜಾ ಮಾಡಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಬೇಕು. ಎಂಬ ಮನವಿ ಪತ್ರವನ್ನು ಸಲ್ಲಿಸಿದರು.