ಮುಂಬೈ: ಬಾಲಿವುಡ್ ನಟಿ ದಿಶಾಪಟಾನಿ ತಂದೆಗೆ 25 ಲಕ್ಷ ರೂಪಾಯಿ ವಂಚಿಸಲಾಗಿದೆ. ದಿಶಾ ಅವರ ತಂದೆ ಜಗದೀಶ್ ಸಿಂಗ್ ಪಟಾನಿ ಅವರಿಗೆ ಸರ್ಕಾರಿ ಆಯೋಗದಲ್ಲಿ ಉನ್ನತ ಸ್ಥಾನ ನೀಡುವುದಾಗಿ ಹೇಳಿ 25 ಲಕ್ಷ ರೂಪಾಯಿಗಳನ್ನು ವಂಚಿಸಲಾಗಿದೆ. ಈ ಸಂಬಂಧ ಬರೇಲಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಪಟಾನಿ ಅವರ ತಂದೆಗೆ ವಂಚಕ ಕರೆ ಮಾಡಿ, ಉತ್ತರ ಪ್ರದೇಶ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿದ್ದು, ಹಣ ನೀಡಿದರೆ ಯುಪಿ ರಾಜ್ಯ ಸರ್ಕಾರದ ಕಾರ್ಪೋರೇಷನ್ ಸಂಸ್ಥೆಯ ಅಧ್ಯಕ್ಷನಾಗಿ ನೇಮಿಸುವುದಾಗಿ ಭರವಸೆ ನೀಡಿದ್ದಾನೆ. ವಂಚಕನ ಮಾತಿಗೆ ಮರಳಾದ ಪಟಾನಿ ನಕಲಿ ಬ್ಯಾಂಕ್ ಖಾತೆಗೆ 20 ಲಕ್ಷ ಹಣ ವರ್ಗಾಯಿಸಿದ್ದು, 5 ಲಕ್ಷ ನಗದು ನೀಡಿದ್ದಾರೆ. ಆದರೆ ಬಹಳ ದಿನಗಳಾದರೂ ಕೆಲಸ ಆಗದೇ ಇದ್ದಾಗ ತಾನು ಮೋಸ ಹೋಗಿದ್ದು ಅರಿವಿಗೆ ಬಂದಿದ್ದು, ಬರೇಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಆದರೆ ಈ ಕುರಿತು ದಿಶಾ ಪಟಾನಿ ಕುಟುಂಬ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.