ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಜವಳಿ ಇಲಾಖೆಯಿಂದ ಕೇಂದ್ರ ರಾಜ್ಯ ಸರ್ಕಾರದ ವತಿಯಿಂದ ಖಾದಿ ಕೈಮಗ್ಗದ ತರಬೇತಿ ಘಟಕ ಪ್ರಾರಂಭಗೊಂಡಿಗೆ,ಸದರಿ ತಾಲೂಕಿನಲ್ಲಿ ಯಾವೊಬ್ಬ ನೇಕಾರರು ಇಲ್ಲದೆ ಇದ್ದರೂ ಕೆಲವು ಜನರ ಆಸಕ್ತಿ ಹಾಗೂ ಸತತ 2 ವರ್ಷಗಳ ಪರಿಶ್ರಮದಿಂದ ಈ ಘಟಕ ಪ್ರಾರಂಭಗೊಂಡಿದೆ.
ಸಮರ್ಥ ಎಂಬ ಹೆಸರಿಂದ ಗುರುತಿಸಿಕೊಂಡಿರುವ ಈ ಯೋಜನೆಯಲ್ಲಿ ಸಧ್ಯ 30 ಜನ ತರಬೇತಿಗೆ ಅನಿಯಾಗಿದ್ದಾರೆ, 45ದಿನಗಳ ತರಬೇತಿಯಲ್ಲಿ ದಿನಕ್ಕೆ 300 ರೂಪಾಯಿಯಂತೆ ವೇತನ ನೀಡಲಾಗುತ್ತಿದೆ,
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಉಚಿತ ‘ಹೊಲಿಗೆ ಯಂತ್ರ’!
3 ಜನ ತರಬೇತಿ ನೀಡುತ್ತಿದ್ದಾರೆ, ಖಾದಿ ಬಟ್ಟೆ ದರಿಸುವದರಿಂದ ಅರೋಗ್ಯ ಹಾಗೂ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ, ನಾವೆಲ್ಲರೂ ಪಾಶಿಮತ್ಯ ಉಡುಗೆಗೆ ಮಾರುಹೋಗದೆ ದೇಶೀ ಬಟ್ಟೆಗಳನ್ನೇ ದರಿಸೋಣ ಎಂದು ಡಾ. ಸುಮಿತ್ ಪಾಟೀಲ್ ಹೇಳಿದರುಅಮರ ಬಂತಿ, ತುಲಸಿ ರಾಮಣ್ಣ, ಸುಮಿತ್ ಪಾಟೀಲ್ ಯೋಜನಾಧಿಕಾರಿಗಳು ಅನೇಕ ಗಣ್ಯರು ಉಪಸ್ಥಿತರಿದ್ದರು
ವರದಿ : ಎಂ. ಕೆ. ಸಪ್ತಸಾಗರ
ಚಿಕ್ಕೋಡಿ