ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆಯ ಮುಖ್ಯ ಅಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.71ನೇ ಸಹಕಾರ ಸಪ್ತಾಹದ ಅಂಗವಾಗಿ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳಲ್ಲಿ ರೈತ ಗೀತೆಯಂತೆ ನೇಕಾರ ಗೀತೆಯನ್ನು ಕೂಡಾ ಅಳವಡಿಸಿ ಮತ್ತು ನೇಕಾರರ ತವರು ಜಿಲ್ಲೆ ಬಾಗಲಕೋಟೆಗೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಜವಳಿ ಸಚಿವರು ರಾಜ್ಯದ ಕೆ ಹೆಚ್ ಡಿ ಸಿ ನಿಗಮದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆ ಮಾಡಿ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಎರಡು ಬಾರಿ ಧರಣಿ ಮಾಡಿದರೂ ಬೇರೆ ಬೇರೆ ಹೋರಾಟಗಳ ಮೂಲಕ ಸರ್ಕಾರ ಗಮನಕ್ಕೆ ತಂದರು ಕೂಡ ಯಾವುದೇ ಉತ್ತರವನ್ನು ನೀಡದೇ ಇರುವುದು ಬೇಸರ ಸಂಗತಿ.
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಉಚಿತ ‘ಹೊಲಿಗೆ ಯಂತ್ರ’!
ಅವ್ಯವಹಾರ ನಡೆಸಿದವರು ಮತ್ತು ಸಚಿವರು ಹೊಂದಾಣಿಕೆ ಮಾಡಿಕೊಂಡು ನಿಗಮವನ್ನೇ ಮುಚ್ಚುವ ಸ್ಥಿತಿಗೆ ತಲುಪಿಸಿದ್ದಾರೆ.ಕಾರಣ ನೇಕಾರರ ಜಿಲ್ಲೆ ಬಾಗಲಕೋಟೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ಸಹಕಾರ ಸಚಿವರು ಜವಳಿ ಸಚಿವರು ನಮ್ಮ ಸಮಸ್ಯೆಗಳ ಕುರಿತು ಸಮರ್ಪಕ ಉತ್ತರ ನೀಡದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನೇಕಾರರು ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಪ್ರತಿಭಟನೆಗೆ ಮುಂದಾಗುತ್ತೇವೆಂದು ಈ ಮೂಲಕ ಎಚ್ಚರಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ರಾಜೇಂದ್ರ ಮಿರ್ಜಿ. ಈರಪ್ಪ ಚಮಕೇರಿ. ಮಲ್ಲಪ್ಪ ಮಿರ್ಜಿ. ಗಿರಮಲ್ಲ ಕೈಸೋಲಗಿ. ರಾಜು ಕುಕ್ಕುಗೊಳ. ಮಹಾಲಿಂಗಪ್ಪ ಕಲಾದಗಿ. ಜಿ ಬಿ ಬಂಡಿಗಣಿ. ರಾಜು ಹನಗಂಡಿ. ಮಲ್ಲು ಜಮಖಂಡಿ. ಬಸವರಾಜ ಢವಳೇಶ್ವರ. ಮುದಕಪ್ಪ್ಪಗೊಳ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ