ಶಿವಮೊಗ್ಗ: ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಠಾಣಾ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ. ಈಶ್ವರಪ್ಪ ಧಾರ್ಮಿಕ ವಿಚಾರವಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕೆ ಜಯನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಹೆಚ್ ಎಂ ಸಿದ್ದೇ ಗೌಡ ನಿನ್ನೆ ದೂರನ್ನ ನೀಡಿದ್ದರು, ಈ ದೂರಿನ ಹಿನ್ನಲೆ ಈಶ್ವರಪ್ಪ ವಿರುದ್ದ ಸುಮೊಟೊ ಕೇಸ್ ದಾಖಲಾಗಿದೆ.
ಏನಿದು ಪ್ರಕರಣ
ಬುದುವಾರ ನವಂಬರ್ 13 ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈಶ್ವರಪ್ಪ ವಕ್ಪ್ ಅಂಬೇಡ್ಕರ್ ಹಾಗೂ ಮುಸ್ಲಿಂ ಗುತ್ತಿಗೆ ಮೀಸಲಾತಿ ಬಗ್ಗೆ ಮಾತನಾಡಿದ್ದರಯ.̤ ಇತ್ತೀಚೆಗೆ ಮುಸಲ್ಮಾನರು ಮಾಡುತ್ತಿರುವ ಆಚಾತುರ್ಯವನ್ನು ಕಾಂಗ್ರೆಸ್ ಕಂಡರೂ ಕಾಣದಂತೆ ಕುಳಿತಿದೆ.ರಾಜ್ಯದ ರೈತರ ಭೂಮಿ ವಕ್ಫ್ ಹೆಸರಿನಲ್ಲಿ ಮುಸಲ್ಮಾನರ ಕೈ ಸೇರುತ್ತಿದೆ. ವಿಶ್ವೇಶ್ವರಯ್ಯ ಅವರು ಹುಟ್ಟಿದ ಜಾಗವನ್ನು ಸಹ ವಕ್ಫ್ ಹೆಸರಿಗೆ ಮಾಡಲು ಹೊರಟಿದ್ದಾರೆ.
ಆದರೆ ಇದನ್ನು ವಿರೋಧಿಸಿ ಯಾವೊಬ್ಬ ಕಾಂಗ್ರೆಸ್ ನಾಯಕರು ಮಾತನಾಡಲಿಲ್ಲ. ಕಾಂಗ್ರೆಸ್ ಹಿಂದೂಸ್ಥಾನವನ್ನು ಪಾಕಿಸ್ಥಾನ ಮಾಡಲು ಹೊರಟಿದೆ ಎಂದಿದ್ದರು, ಹಾಗೆಯೇ ಕಾಂಗ್ರೆಸ್ ನಾಯಕರು ಇಂತಹ ವಿಚಾರಗಳನ್ನ ನ್ಯಾಯಬದ್ದವಾಗಿ ತೀರ್ಮಾನ ಮಾಡದಿದ್ದರೆ. ಮುಂದೊಂದು ದಿನ ಕಾಂಗ್ರೆಸಿಗರನ್ನು ಹುಡುಕಿ ಕೊಲ್ಲುವ ದಿನ ಬರುತ್ತದೆ ಎಂದಿದ್ದರು, ಈ ಹಿನ್ನಲೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.