ಬೆಂಗಳೂರು : ಕರ್ನಾಟಕದ ಹೆಮ್ಮೆ ನಮ್ಮ ಕೆಎಂಎಫ್ . ಇದೀಗ ಕೆಎಂಎಫ್ ಉತ್ಪನ್ನಗಳು ರಾಷ್ಟ್ರ ರಾಜಧಾನಿಯಲ್ಲೂ ಲಭಿಸಲಿವೆ. ಹೌದು, ದೆಹಲಿಯಲ್ಲಿ ಕೆಎಂಎಫ್ ಔಟ್ಲೆಟ್ ಮತ್ತೆ ಆರಂಭವಾಗಲಿದ್ದು, ಸಿಎಂ ಸಿದ್ದರಾಮಯ್ಯ ಕೆಎಂಎಫ್ ಔಟ್ ಲೆಟ್ ಗಳನ್ನು ಉದ್ಘಾಟಿಸಲಿದ್ದಾರೆ.
ಮೊಬೈಲ್ ಕೊಡಿಸುವಂತೆ ಮಗನ ಹಠ : ಕೋಪಗೊಂಡ ಅಪ್ಪನಿಂದ ನಡದೇ ಹೋಯ್ತು ಅಚಾತುರ್ಯ
29 ವರ್ಷಗಳ ಹಿಂದೆಯೇ ದೆಹಲಿಗೆ ಕೆಎಂಎಫ್ ಹಾಲನ್ನು ಪೂರೈಸುತ್ತಿತ್ತು. ಆದರೆ ತದನಂತರದಲ್ಲಿ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಹಸುವಿನ ಹಾಲು ಪೂರೈಸುವಂತೆ ಕೆಎಂಎಫ್ಗೆ ದೆಹಲಿ ಸರ್ಕಾರ ಮನವಿ ಮಾಡಿತ್ತು. ಈ ಸಂಬಂಧ ಕಳೆದ ನಾಲ್ಕೈದು ತಿಂಗಳಿಂದ ದೆಹಲಿ ಸರ್ಕಾರದ ಜೊತೆ ಕೆಎಂಎಫ್ ಮಾತುಕತೆ ನಡೆಸುತ್ತಿತ್ತು. ಇದೀಗ ಕೆಎಂಎಫ್ ಉತ್ಪನ್ನ ಪೂರೈಸಲು ಸಮ್ಮತಿಸಿದ್ದು, ನವೆಂಬರ್ 21ರಿಂದ ಕೆಎಂಎಫ್ ಔಟ್ ಲೆಟ್ ಗಳು ಆರಂಭವಾಗಲಿದ್ದು, ಆರಂಭಿಕ ಹಂತದಲ್ಲಿ ಕೆಎಂಎಫ್ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸಲು ಮುಂದಾಗಿದೆ. ದೆಹಲಿಯಲ್ಲಿ ಅಮೂಲ್ ಮತ್ತು ಮದರ್ ಡೈರಿ ಚಾಲ್ತಿಯಲ್ಲಿದ್ದು, ಕೆಎಂಎಫ್ ಇವಕ್ಕೆ ಪೈಪೋಟಿ ನೀಡಲಿದೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮತ್ತು ಕೇರಳಕ್ಕೆ ಕೆಎಂಎಫ್ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.