ಬೆಂಗಳೂರು: ಮೊಬೈಲ್ ವಿಚಾರಕ್ಕೆ ತಂದೆಯೇ ಮಗನ ಕೊಲೆ ಮಾಡಿರುವ ಘಟನೆ ನಡೆದಿದೆ. ನಗರದ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ. 14 ವರ್ಷದ ತೇಜಸ್ ಕೊಲೆಯಾದ ಬಾಲಕನಾಗಿದ್ದು, ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ತೇಜಸ್ , ಇತ್ತೀಚೆಗೆ ಶಾಲೆಗೆ ಹೋಗಲು ನಿರಾಕರಸುತ್ತಿದ್ದ, ಶಾಲೆಗೆ ಹೋಗು ಅಂದದಕ್ಕೆ ಕೋಪಗೊಂಡಿದ್ದ. ನನಗೆ ಮೊಬೈಲ್ ಕೊಡಿಸು ಎಂದು ಹಠ ಮಾಡುತ್ತಿದ್ದ. ಆದರೆ ಈಗಾಗಲೇ ಒಂದು ಮೊಬೈಲ್ ಹೊಡೆದು ಹಾಕಿದ್ದನು. ಈಗ ಮತ್ತೊಂದು ಮೊಬೈಲ್ ಕೊಡಿಸುವಂತೆ ಒತ್ತಾಯ ಮಾಡಿದ್ದ.
ಶ್ರೀಲಂಕಾ ಸಾರ್ವತ್ರಿಕ ಚುನಾವಣೆ: ಡಿಸ್ಸಾನಾಯಕೆ ನೇತೃತ್ವದ ಮೈತ್ರಿಕೂಟಕ್ಕೆ ಭರ್ಜರಿ ಜಯ
ಇದರಿಂದ ಕೋಪಗೊಂಡ ಆರೋಪಿ ರವಿ ಮಗನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಕುಸಿದು ಬಿದ್ದಾಗ ನಾಟಕ ವಾಡುತ್ತಿದ್ದಾನೆಂದು ತಾತ್ಸಾರ ಮಾಡಿದ್ದಾನೆ. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಬಾಲಕ ಮೃತ ಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆ.ಎಸ್.ಲೇಔಟ್ ಪೊಲೀಸರು, ಆರೋಪಿ ರವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.