ನವದೆಹಲಿ: ಪ್ರಸಕ್ತ ವರ್ಷದ ಆರಂಭದಿಂದಲೂ ಬೋಯಿಂಗ್ ಕಂಪನಿ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇದರ ಬೆನ್ನಲ್ಲೇ ಕಂಪನಿಯಿಂದ 17,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ. ಈ ನಿರ್ಧಾರದ ಬೆನ್ನಲ್ಲೇ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಜಾಗತಿಕಮಟ್ಟದಲ್ಲಿ ಇರುವ ಒಟ್ಟು ಉದ್ಯೋಗಿಗಳ ಪೈಕಿ 10%ನಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುವುದು. ಕಂಪನಿಯ ದಕ್ಷತೆ ಹೆಚ್ಚಿಸಲು ಹಾಗೂ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಉಚಿತ ‘ಹೊಲಿಗೆ ಯಂತ್ರ’!
ಪ್ರಸಕ್ತ ವರ್ಷದ ಆರಂಭದಿಂದಲೂ ಬೋಯಿಂಗ್ ಕಂಪನಿ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಮೆರಿಕದಲ್ಲಿ 33,000 ಉದ್ಯೋಗಿಗಳು ಹಲವು ವಾರಗಳವರೆಗೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಕಂಪನಿಯ ವಾಣಿಜ್ಯ ವಿಮಾನಗಳ ತಯಾರಿಕೆಗೆ ಪೆಟ್ಟು ಬಿದ್ದಿತ್ತು.
ಸ್ಪೇಸ್ ಎಕ್ಸ್, ಬ್ಲ್ಯೂ ಓರಿಜಿನ್ ಎಲ್ಎಲ್ಸಿ ಮತ್ತು ಅಮೆಜಾನ್ನಂತಹ ಸಂಸ್ಥೆಗಳು ಅಮೆರಿಕಾದ ಸೀಟಲ್ನಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಪ್ರತಿಸ್ಪರ್ಧಿಗಳು. ಈ ಕಂಪನಿಗಳಲ್ಲಿ ಹೊಸ ನೇಮಕಾತಿಗಳಿಗೆ ಅವಕಾಶಗಳು ಹೆಚ್ಚಿದ್ದು, ಬೋಯಿಂಗ್ನಿಂದ ಹೊರಬಿದ್ದ ಉದ್ಯೋಗಿಗಳು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಾಗಿದೆ. ಬೋಯಿಂಗ್ ಹೆಚ್ಚಿನ ವಾಣಿಜ್ಯ ವಿಮಾನಗಳನ್ನು ತಯಾರಿಸುತ್ತದೆ ಎಂದು ಬಾಹ್ಯಾಕಾಶ ಉದ್ಯಮ ವಿಶ್ಲೇಷಕ ಮತ್ತು ಸಲಹೆಗಾರರಾದ ಸ್ಟಾನ್ ಶುಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲಯನ್ಸ್ ವೆಲಾಸಿಟಿ ಎಲ್ಎಲ್ಸಿ, ಎಲಾನ್ ಮಸ್ಕ್ ಅವರ ಬಾಹ್ಯಾಕಾಶದ ಸ್ಟಾರ್ಲಿಂಕ್ ಉಪಗ್ರಹಗಳಲ್ಲಿ ಕೆಲಸ ಮಾಡುವುದರಿಂದ ಹಿಡಿದು ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ಅವರ ಸಂಸ್ಥೆಗಳಲ್ಲಿ ರಾಕೆಟ್ಗಳು, ಚಂದ್ರನ ಲ್ಯಾಂಡರ್ಗಳು ಮತ್ತು ಮುಂತಾದವುಗಳಿಗೆ ಸಹಾಯ ಮಾಡುವವರಿಗೆ ಇಲ್ಲಿ ಉತ್ತಮವಾದ ಅವಕಾಶವಿದೆ. ಅಲ್ಲಿ ಕೆಲಸ ಕಳೆದುಕೊಂಡವರು, ಬೋಯಿಂಗ್ ಪ್ರತಿಸ್ಪರ್ಧಿ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದು ಎಂದು ಸ್ಟಾನ್ ಶುಲ್ ಸಲಹೆ ನೀಡಿದ್ದಾರೆ.