ತಿರುಪತಿ: ಲಡ್ಡು ಅಕ್ರಮದಲ್ಲಿ ಸಾಕಷ್ಟು ಸದ್ದು ಮಾಡಿದ್ದ ತಿರುಪತಿ ತಿಮ್ಮಪ್ಪನ ಸನ್ನಿಧಾನದ ಈಗಷ್ಟೇ ಶಾಂತವಾಗ್ತಿದೆ. ಈ ಮಧ್ಯೆ ಸಿಲಿಕಾನ್ ಸಿಟಿ ತಿರುಮಲ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿದ್ದ ದಿವಂಗತ ಆದಿಕೇಶವಲು ಅಳಿಯ ಜಿವಿಎಸ್ ಎಸ್ಟೇಟ್ ಚೇರ್ಮನ್ ಶ್ರೀನಿವಾಸಮೂರ್ತಿ ಭೂದೇವಿ ಮತ್ತು ಶ್ರೀದೇವಿಗೆ ಗಂಡಭೇರುಂಡ ವಜ್ರಮಾಲೆ ಮತ್ತು ವೈಜಯಂತಿ ಮಾಲೆ ಕೊಡುಗೆ ನೀಡಿದ್ದಾರೆ.
ಬೆಂಗಳೂರು: ಇಬ್ಬರು ಬೈಕ್ ಕಳ್ಳರು ಅರೆಸ್ಟ್, 11 ದ್ವಿಚಕ್ರ ವಾಹನ ಸೀಜ್!
ಇಂದು ಮುಂಜಾನೆ ಕೆ.ಎಂ. ಶ್ರೀನಿವಾಸಮೂರ್ತಿ ಅವರ ಕುಟುಂಬ ತಿಮ್ಮಪ್ಪನ ಸನ್ನಿಧಿಗೆ ಅಪರೂಪದ ನೀಲಿ ನವ ರತ್ನಗಳೊಂದಿಗೆ ವಿಶಿಷ್ಟವಾಗಿ ವಿನ್ಯಾಸಗೊಳಿಸಿರೋ ಗಂಡಭೇರುಂಡ ವಜ್ರಮಾಲೆ ಹಾಗೂ ರುಬೀಗಳ ವೈಜಯಂತಿ ಮಾಲೆಯನ್ನು ದೇವಸ್ಥಾನಕ್ಕೆ ಕೊಡುಗೆ ನೀಡಿದ್ದಾರೆ.
ಈ ಆಭರಣಗಳ ಮೌಲ್ಯ ಅಂದಾಜು 1.26 ಕೋಟಿ ಎಂದು ಹೇಳಲಾಗ್ತಿದೆ. ಶ್ರೀನಿವಾಸ್ ಕುಟುಂಬಕ್ಕೂ ತಿಮ್ಮನ್ನ ಸನ್ನಿದಿಗೂ ಸಾಕಷ್ಟು ಒಡನಾಟವಿದ್ದು, ತಿಮ್ಮಪ್ಪ ಉದ್ಯಮಿ ಶ್ರೀನಿವಾಸ್ ಅವರ ಮನೆ ದೇವರು ಕೂಡ ಆಗಿದೆ. ಇಂದು ತಮ್ಮ ತುಂಬು ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳಿ ಈ ಸೇವೆ ಸಲ್ಲಿಸಿದ್ದಾರೆ. ಇನ್ನೂ ತಿಮ್ಮಪ್ಪನ ಸನ್ನಿಧಿಗೆ ಆಭರಣಗಳನ್ನ ಕೊಡುಗೆ ನೀಡಿದಾರೆ.