ಹುಬ್ಬಳ್ಳಿ: ಜಿಡಿಪಿಯಲ್ಲಿ ಕರ್ನಾಟಕ ನಂಬರ್ 1 ಆಗಿದ್ದುಗುಜರಾತ್ ಯಾವುದರಲ್ಲಿ ನಂಬರ್ ಒನ್ ಇದೆ? ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರಶ್ನೆ ಮಾಡಿದರು.
Ramalingareddy: ಶಕ್ತಿ ಯೋಜನೆಗೆ ಮಹಿಳಾ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!
ನಗರದಲ್ಲಿಂದು ಹೊಸ ಬಸ್ ಲೋಕಾರ್ಪಣೆ ವೇಳೆ ಮಾತನಾಡಿದ ಅವರುಗುಜರಾತ್ ಯಾವದರಲ್ಲಿ ನಂಬರ್ 1 ಇಲ್ಲ ಬರೀ ಸುಳ್ಳು ಹೇಳಿ ಗುಜರಾತ್ ಮಾರ್ಕೆಟ್ ಮಾಡಿದ್ದಾರೆ. ಶಿಕ್ಷಣ ಇರಲಿ ಯಾವ ಕ್ಷೇತ್ರದಲ್ಲೂ ಗುಜರಾತ್ ನಂಬರ್ 1 ಇಲ್ಲ ಎಂದರು. ಇನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕರ್ನಾಟಕದ ಬಂಗಾರದ ಮನುಷ್ಯ ಆಗಿದ್ದು ಅತ್ಯಂತ ಸರಳ ಜೀವಿರಾಮಲಿಂಗಾರೆಡ್ಡಿ ಸೋಲಿಲ್ಲದ ಸರದಾರ ಎಂದು ಹಾಡಿ ಹೊಗಳಿದರು.
ಇವತ್ತು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಕಾರಣ ನೌಕರರು, ಅವರಿಗೆ ಅಭಿನಂದನೆ ಸಲ್ಲಿಸಿದರು. ಆನ್ ಡ್ಯೂಟಿ ಯಲ್ಲಿ ಜೀವ ಕಳೆದುಕೊಂಡರೆ ಪರಿಹಾರ ಕೊಡೋದು ಎಲ್ಲೂ ಇಲ್ಲ. ಇದ್ರೆ ಅದು ಕರ್ನಾಟಕದಲ್ಲಿ ಮಾತ್ರ. ಗ್ರ್ಯಾಚೂಟಿ ಹಣ ಪೆಂಡಿಂಗ್ ಇದೆ. ನಮ್ಮದು ನುಡಿದಂತೆ ನಡೆದ ಸರ್ಕಾರ. ನಮ್ಮ ವಿಭಾಗಕ್ಕೆ 500 ಕ್ಕೂ ಹೆಚ್ಚು ಬಸ್ ಕೊಟ್ಟಿದ್ದಾರೆಐದು ಯೋಜನೆಯಲ್ಲಿ ಈ ಯೋಜನೆ ಅತ್ಯಂತ ಪ್ರಮುಖ ಯೋಜನೆ. ಶಕ್ತಿ ಯೋಜನೆ ಅತ್ಯಂತ ಪ್ರಮುಖ ಯೋಜನೆ ಆಗಿದ್ದುಹೆಣ್ಮಕ್ಕಳಿಗೆ ಇಂತಹ ಅವಕಾಶ ಕೊಟ್ಟಿದ್ದು, ಸಿದ್ದರಾಮಯ್ಯ ಸರ್ಕಾರ, ರಾಮಲಿಂಗಾರೆಡ್ಡಿ ಸರ್ಕಾರ
ವಿರೋಧಿಗಳು ಮೊದಲಿನಿಂದಲೂ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ರು, ಆದ್ರೆ ಸರ್ಕಾರ ಬಂದಾಗಿಂದ ಈ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇವತ್ತು 2000 ನೋಟ್ ಎಲ್ಲಿದೆ ಧಾರವಾಡ ಜಿಲ್ಲೆಗೆ ಇನ್ನು ಬಸ್ ಬೇಕೆಂದರು