ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳಕ್ಕೆ ಬಸ್ ಘಟಕ ಮಾಡಬೇಕು ಹಾಗೂ ಲಕ್ಷ್ಮೇಶ್ವರ ದಿಂದ ಕುಂದಗೋಳ ಗುಡೇನಕಟ್ಟಿ ನಾಗರಹಳ್ಳಿ ಮಂಟೂರ ಬಂಡಿವಾಡ ಮಾರ್ಗವಾಗಿ ಹುಬ್ಬಳ್ಳಿಗೆ ಬಸ್ ಸಂಚಾರ ಆರಂಭಿಸಬೇಕೆಂದು ಹುಬ್ಬಳ್ಳಿಯಲ್ಲಿ ಸಾರಿಗೆ ಸಂಸ್ಥೆಯ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ
ರೈತ ಮುಖಂಡ ಬಸವರಾಜ ಯೊಗಪ್ಪನವರ ಮನವಿ ಸಲ್ಲಿಸಿದರು.
ಕೋಲಾರ: ಕೃಷಿ ಹೊಂಡದಲ್ಲಿ ಮಹಿಳೆ ಶವಪತ್ತೆ, ಪೊಲೀಸರಿಂದ ತನಿಖೆ ಚುರುಕು!
ನಗರದಲ್ಲಿಂದು ಸಾರಿಗೆ ಸಚಿವರನ್ನ ಭೇಟಿ ಮಾಡಿ ಮನವಿ ಮಾಡಿದ ಅವರುಕುಂದಗೋಳ ಕ್ಕೆ ಬಸ್ ಘಟಕ ಅವಶ್ಯಕತೆ ಇದ್ದು ಇದರಿಂದ ದಿನನಿತ್ಯ ಹಳ್ಳಿಯ ಜನರಿಗೆ ಓಡಾಡಲು ಹಾಗೂ ಪ್ರಯಾಣಿಕರಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಘಟಕ ಸ್ಥಾಪನೆ ಮಾಡಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಅವರಿಗೆ ಮನವರಿಕೆ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿಚನ್ನಬಸಪ್ಪ ಸಿದ್ದುನ್ನವರ, ರಾಜು ಮಲ್ಲಿಗವಾಡ, ಭೀಮಪ್ಪ ಪೂಜಾರ್ ಬಾಹುಬಲಿ ಮಲ್ಲಿಗವಾಡ, ಮಮ್ಮದ್ ಹುಸೇನ ಎಲಿಗಾರ್ ,ಯಮನಪ್ಪ ಮಾದರ ಹಾಗೂ ಇನ್ನಿತರ ಈ ಸಂದರ್ಭದಲ್ಲಿ ಇದ್ದರು