ಕಿವಿ ನೋವು ಬಂದವರಿಗೆ ಗೊತ್ತು ಅದೆಷ್ಟು ಕಿರಿಕಿರಿ ಕೊಡುತ್ತೇ ಅಂತ. ಈ ಕಿವಿ ನೋವನ್ನು ತಾಳಿಕೊಳ್ಳುವುದು ತುಂಬಾನೇ ಕಷ್ಟವಾದ ಕೆಲಸ, ಏಕೆಂದರೆ ಕೆಲವು ಬಾರಿ ಎರಡು ಕಿವಿಗಳ ನೋವು ಒಟ್ಟಿಗೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಮಯದಲ್ಲಿ, ಈ ನೋವು ತಾನಾಗಿಯೇ ಹೋಗುತ್ತದೆ. ಮಕ್ಕಳಲ್ಲಿ, ಕಿವಿ ಸೋಂಕುಗಳು ಕಿವಿ ನೋವಿಗೆ ಅತ್ಯಂತ ಸಾಮಾನ್ಯ ಕಾರಣವಾಗಿದ್ದರೆ, ವಯಸ್ಕರಲ್ಲಿ ಇದು ಬೇರೆ ಬೇರೆ ರೀತಿಯ ಕಾರಣಗಳನ್ನು ಹೊಂದಿರುತ್ತದೆ.
ಶ್ರೀಲಂಕಾ ಸಾರ್ವತ್ರಿಕ ಚುನಾವಣೆ: ಡಿಸ್ಸಾನಾಯಕೆ ನೇತೃತ್ವದ ಮೈತ್ರಿಕೂಟಕ್ಕೆ ಭರ್ಜರಿ ಜಯ
ಕಿವಿ ನಮ್ಮ ಇಂದ್ರಿಯಗಳಲ್ಲಿ ಪ್ರಮುಖವಾದ ಅಂಗವಾಗಿದ್ದು ಅತಿಸೂಕ್ಷ್ಮ ನರಗಳಿಂದ ಮೆದುಳಿನೊಂದಿಗೆ ಸಂಪರ್ಕ ಪಡೆದಿರುತ್ತದೆ. ಕೆಲವು ಕಾರಣಗಳಿಂದ ಕಿವಿಯ ಒಳಭಾಗದಲ್ಲಿ ನೋವು ಅಥವಾ ಗುಂಯ್ಗುಡುವುದು ಕೇಳುತ್ತಿದ್ದಂತೆ ಅಪಾರವಾದ ಅಸಹನೆ ಎದುರಾಗುತ್ತದೆ. ಒಂದು ವೇಳೆ ಕಿವಿನೋವು ಆಗಾಗ ಬರುತ್ತಿದ್ದರೆ ಇದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೇ ಇದ್ದರೂ ಒಂದು ಬಾರಿ ವೈದ್ಯರಲ್ಲಿ ತೋರಿಸಿ ಕಾರಣ ಕಂಡುಕೊಳ್ಳುವುದು ಅಗತ್ಯ.
ಹೀಗಾಗಿ ಕೆಲವೊಂದು ಮನೆಮದ್ದು ಟ್ರೈ ಮಾಡಿ.
ಸಾಸಿವೆ ಎಣ್ಣೆ : ಸಾಮಾನ್ಯವಾಗಿ ಕಿವಿ ನೋವು ಮತ್ತು ತುರಿಕೆ ಕೂಡ ಒಳಗೆ ಮೇಣದ ರಚನೆಯ ಕಾರಣದಿಂದಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸಾಸಿವೆ ಎಣ್ಣೆಯು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಎರಡು ಮೂರು ಹನಿ ಸಾಸಿವೆ ಎಣ್ಣೆಯನ್ನು ಕಿವಿಗೆ ಹಾಕಿ ನಂತರ ಕಿವಿಯನ್ನು ಉಜ್ಜಿಕೊಳ್ಳಿ. 10 ರಿಂದ 15 ನಿಮಿಷ ಹಾಗೆಯೇ ಬಿಟ್ಟು, ನಂತರ ತೆಗೆದರೆ ಒಳಗಿರುವ ಹೊಲಸು ಕರಗಿ ಹೊರಬರುತ್ತದೆ.
ಬೆಳ್ಳುಳ್ಳಿ : ಕಿವಿಯಲ್ಲಿ ತೀವ್ರವಾದ ನೋವು ಇದ್ದರೆ ಎರಡು ಎಸಳು ಬೆಳ್ಳುಳ್ಳಿಯನ್ನು ಪುಡಿಮಾಡಿ ನಂತರ ಸಾಸಿವೆ ಎಣ್ಣೆಯಲ್ಲಿ ಬೇಯಿಸಿ. ಕಿವಿನೋವಿನಿಂದ ಪರಿಹಾರ ಪಡೆಯಲು ಈ ಎಣ್ಣೆಯನ್ನು 10 ರಿಂದ 15 ನಿಮಿಷಗಳ ಕಾಲ ಬಿಡಿ.
ಪುದೀನಾ ಎಲೆಗಳು : ನೀವು ಕಿವಿನೋವಿಗೆ ಪುದೀನಾವನ್ನು ಸಹ ಬಳಸಬಹುದು. ತಾಜಾ ಪುದೀನಾ ಎಲೆಗಳ ರಸವನ್ನು ಹೊರತೆಗೆದು ಒಂದರಿಂದ ಎರಡು ಹನಿಗಳನ್ನು ಕಿವಿಗೆ ಹಾಕಿದರೆ ಶೀಘ್ರ ಪರಿಹಾರ ದೊರೆಯುತ್ತದೆ
ಈರುಳ್ಳಿ ರಸ: ಈರುಳ್ಳಿ ರಸವು ಕಿವಿ ನೋವನ್ನು ನಿವಾರಿಸಲು ಸಹ ಉಪಯುಕ್ತವಾಗಿದೆ. ಇದಕ್ಕಾಗಿ ಒಂದು ಚಮಚ ಈರುಳ್ಳಿ ರಸವನ್ನು ಬೆಚ್ಚಗಾಗಿಸಿ ನಂತರ ಎರಡು ಮೂರು ಹನಿಗಳನ್ನು ಕಿವಿಗೆ ಹಾಕಿ. ಈರುಳ್ಳಿ ರಸವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕಿವಿಗೆ ಹಾಕಿದರೆ ಕಿವಿನೋವು ಗುಣವಾಗುತ್ತದೆ.
(ನಿರಾಕರಣೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು