ಸುರಕ್ಷತೆ ಮತ್ತು ಮಜಬೂತ್ತಾದ ಪ್ರಯಾಣಿಕ ವಾಹನಗಳ ತಯಾರಿಕೆಯಲ್ಲಿ ದೇಶೀಯ ಮೋಟಾರು ವಾಹನ ಉತ್ಪಾದನಾ ಕಂಪನಿ ಮಹೀಂದ್ರಾ ಮುಂದಿದೆ. ಈ ಕಂಪನಿಯಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂನಲ್ಲಿ ಥಾರ್ ರಾಕ್ಸ್, ಎಕ್ಸ್ಯುವಿ 3ಎಕ್ಸ್ಒ ಮತ್ತು ಎಕ್ಸ್ಯುವಿ 400 ಕಾರುಗಳು 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿವೆ.
ಮಹಿಂದ್ರಾ ಥಾರ್ ರಾಕ್ಸ್
ಭಾರತ್ ಎನ್ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ 39ಕ್ಕೆ 31.09 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 45 ಅಂಕಗಳನ್ನು ಪಡೆದು ಥಾರ್ ರಾಕ್ಸ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಥಾರ್ ರಾಕ್ಸ್ 5-ಸ್ಟಾರ್ ಭಾರತ್-ಎನ್ಸಿಎಪಿ ರೇಟಿಂಗ್ ಪಡೆದುಕೊಂಡ ಮೊದಲ ಬಾಡಿ-ಆನ್-ಫ್ರೇಮ್ ಎಸ್ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರು ಏರ್ಬ್ಯಾಗ್ಗಳು, ಎಲ್ಲಾ ಸೀಟ್ಗಳಿಗೆ 3-ಪಾಯಿಂಟ್ ಸೀಟ್ಬೆಲ್ಟ್ಗಳು, ABS, EBD, CBC, ISOFIX ಚೈಲ್ಡ್ ಸೀಟ್ ಆಂಕರ್ಗಳು ಮಹೀಂದ್ರಾ ಥಾರ್ ರಾಕ್ಸ್ ಕಾರಿನ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಗಳಾಗಿವೆ.
ಮಹೀಂದ್ರಾ XUV 3XO
ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.36 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43 ಅಂಕಗಳನ್ನು ಗಳಿಸುವ ಮೂಲಕ XUV 3XO 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಆರು ಏರ್ಬ್ಯಾಗ್ಗಳು, ಎಲ್ಲಾ ಸೀಟ್ಗಳಿಗೆ 3-ಪಾಯಿಂಟ್ ಸೀಟ್ಬೆಲ್ಟ್ಗಳು, ISOFIX ಚೈಲ್ಡ್ ಸೀಟ್ ಆಂಕರ್ಗಳು ಮಹೀಂದ್ರಾ XUV 3XO ಕಾರಿನ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಗಳಾಗಿವೆ.
ಮಹೀಂದ್ರಾ XUV400 EV
ಭಾರತ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆಯಲ್ಲಿ XUV400 EV ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 30.38 ಅಂಕಗಳು ಹಾಗೂ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43 ಅಂಕಗಳನ್ನು ಗಳಿಸುವ ಮೂಲಕ 5-ಸ್ಟಾರ್ ರೇಟಿಂಗ್ ಪಡೆದಿದೆ. 2 ಏರ್ಬ್ಯಾಗ್ಗಳು, ESP, TPMS, ISOFIX ಚೈಲ್ಡ್ ಸೀಟ್ ಆಂಕರ್ಗಳು, ಎಲ್ಲಾ ವೀಲ್ಗಳಲ್ಲಿ ಡಿಸ್ಕ್ ಬ್ರೇಕ್ಗಳನ್ನು XUV400 EV ಕಾರು ಹೊಂದಿದೆ. ಇತ್ತೀಚೆಗಷ್ಟೇ ಗ್ಲೋಬಲ್ ಎನ್ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಹೊಸ ಡಿಸೈರ್ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿತ್ತು.