ಮುಂಬೈ: ಲಾಹ್ಲಿಯ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹರಿಯಾಣ ಮತ್ತು ಕೇರಳ ನಡುವಿನ ಪಂದ್ಯದಲ್ಲಿ ಅಂಶುಲ್ ಕಾಂಬೋಜ್ ರಣಜಿ ಟ್ರೋಫಿ ಇತಿಹಾಸದಲ್ಲಿ 39 ವರ್ಷಗಳ ಬಳಿಕ ಹರಿಯಾಣದ ವೇಗಿ ದಾಖಲೆಯೊಂದನ್ನು ಬರೆದಿದ್ದಾರೆ.
ಇನ್ನಿಂಗ್ಸ್ವೊಂದರಲ್ಲಿ ಎಲ್ಲಾ 10 ವಿಕೆಟ್ಗಳನ್ನು ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಾಹ್ಲಿಯ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹರಿಯಾಣ ಮತ್ತು ಕೇರಳ ನಡುವಿನ ಪಂದ್ಯದಲ್ಲಿ ಈ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.
ಪಂದ್ಯಾವಳಿಯ ಇತಿಹಾಸದಲ್ಲಿ ಈ ಅಪರೂಪದ ಮೈಲಿಗಲ್ಲನ್ನು ಸಾಧಿಸಿದ ಮೂರನೇ ಬೌಲರ್ ಕಾಂಬೋಜ್. ಇವರ ಬೌಲಿಂಗ್ ದಾಳಿಯು ಕೇರಳವನ್ನು ಮೊದಲ ಇನ್ನಿಂಗ್ಸ್ನಲ್ಲಿ 291 ರನ್ಗಳಿಗೆ ಕಟ್ಟಿಹಾಕಿತು. ಇನ್ನಿಂಗ್ಸ್ನಲ್ಲಿ 30.1 ಓವರ್ಗಳಲ್ಲಿ 49 ರನ್ ನೀಡಿದ ಕಾಂಬೋಜ್ 10 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಋತುವಿನಲ್ಲಿ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದಿದ್ದ ಕಾಂಬೋಜ್, ಈ ಅಸಾಮಾನ್ಯ ಪ್ರದರ್ಶನದ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ರಣಜಿ ಟ್ರೋಪಿಯಲ್ಲಿ 1956-57ರಲ್ಲಿ ಅಸ್ಸಾಂ ವಿರುದ್ಧ ಬಂಗಾಳದ ಪ್ರೇಮಾಂಗ್ಸು ಚಟರ್ಜಿ (10/20) ಮತ್ತು 1985-86ರಲ್ಲಿ ವಿದರ್ಭ ವಿರುದ್ಧ ರಾಜಸ್ಥಾನದ ಪ್ರದೀಪ್ ಸುಂದರಂ (10/78) ಈ ಸಾಧನೆ ಮಾಡಿದ್ದರು.
10 ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿ
10/20 – ಪ್ರೇಮಾಂಗ್ಶು ಚಟರ್ಜಿ – ಬಂಗಾಳ ವಿರುದ್ಧ ಅಸ್ಸಾಂ (1956-57) – ರಣಜಿ ಟ್ರೋಫಿ
10/46 – ಡೆಬಾಸಿಸ್ ಮೊಹಾಂತಿ – ಪೂರ್ವ ವಲಯ v ದಕ್ಷಿಣ ವಲಯ (2000-01) – ದುಲೀಪ್ ಟ್ರೋಫಿ
10/49 – ಅಂಶುಲ್ ಕಾಂಬೋಜ್ – ಹರಿಯಾಣ v ಕೇರಳ (2024-25)
10-74 – ಅನಿಲ್ ಕುಂಬ್ಳೆ – ಭಾರತ v ಪಾಕಿಸ್ತಾನ (1999) – ಕೋಟ್ಲಾ – ಟೆಸ್ಟ್ ಪಂದ್ಯ
10/78 – ಪ್ರದೀಪ್ ಸುಂದರಂ – ರಾಜಸ್ಥಾನ ವಿರುದ್ಧ ವಿದರ್ಭ (1985-86) – ರಣಜಿ ಟ್ರೋಫಿ
10/78 – ಸುಭಾಷ್ ಗುಪ್ತೆ – ಬಾಂಬೆ v ಪಾಕಿಸ್ತಾನ ಕಂಬೈನ್ಡ್ ಸರ್ವಿಸಸ್ ಮತ್ತು ಬಹವಲ್ಪುರ್ XI (1954-55)