ಹುಬ್ಬಳ್ಳಿ: ಶಕ್ತಿ ಯೋಜನೆಯ ಪರಿಷ್ಕರಣೆ ಮಾಡಲಾಗುತ್ತಿದ್ದು ನಿಲ್ಲಿಸಲಾಗುತ್ತದೆ ಎಂದು ಚರ್ಚೆ ಜೋರಾಗಿತ್ತು. ಇದರ ಮಧ್ಯೆ ರಾಜ್ಯ ಸರ್ಕಾರಿ ನೌಕರರು, ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ಕುರಿತು ಆಡಳಿತ ಪಕ್ಷ ಕಾಂಗ್ರೆಸ್ನ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಅವರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಗೆ ಬಹಳ ಜನರು ಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹೊಸ ಬಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಈ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಯಾವುದೇ ರೈತಪರ ಯೋಜನೆಗಳು ಜಾರಿಯಾಗಿಲ್ಲ. ಅಧಿಕಾರ ಹಿಡಿಯುವಾಗ ರೈತ ಪರ ಮಾಡುವ ಪಕ್ಷಗಳು, ರಾಜಕಾರಣಗಳು ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಮರೆಯುತ್ತಾರೆ. ಸದ್ಯ ಕಾಂಗ್ರೆಸ್ ಬಂದ ಮೇಲೂ ಹಾಗೆಯೇ ಆಗಿದೆ ಎಂದು ಸ್ವಪಕ್ಷ ಆಡಳಿತದ ವಿರುದ್ಧವೇ ಕಿಡಿ ಕಾರಿದ್ದರು. ಬೇಸರ ಹೊಸ ಹಾರಕಿದ್ದಾರು. ಇದೇ ವೇಳೆ ಅವರುಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದು ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸುವ ಈ ಶಕ್ತಿ ಯೋಜನೆ ಬಹಳ ಪುಣ್ಯದ ಕೆಲಸವಾಗಿದೆ. ಆದರೆ ಈ ಯೋಜನೆಗೆ ಸಾಕಷ್ಟು ಜನರು ಶಾಪವನ್ನು ಹಾಕತ್ತಿದ್ದಾರೆ ಅಂತಲೂ ತಿಳಿಸಿದ್ದಾರೆ.
ರೈತರೇ ಗಮನಿಸಿ.. ಕಡಿಮೆ ಬಂಡವಾಳ, ಅಧಿಕ ಲಾಭ! ಈ ಬೆಳೆಯಿಂದ ಲಕ್ಷಗಟ್ಟಲೆ ಲಾಭ ಪಡೆಯಬಹುದು!
ವೇತನ ತಾರತಮ್ಯ ವ್ಯವಸ್ಥೆ ಬದಲಾಗಬೇಕಿದೆಸರ್ಕಾರಿ ನೌಕರರಿಗೆ ಸಾಮಾಜಿಕ ನ್ಯಾಯ ಸಿಗಬೇಕಿದೆ. ಸರ್ಕಾರಿ ನೌಕರರು ಎಸಿ ಫ್ಯಾನ್ ಕೆಳಗೆ ಕೂತು ಕೆಲಸ ಮಾಡುತ್ತಾರೆ. ಈ ಪೈಕಿ ಯಾರು ಹೆಚ್ಚು ಕೆಲಸ ಮಾಡುತ್ತಾರೋ ಅವರಿಗೆ ಕಡಿಮೆ ವೇತನ ಸಿಗುತ್ತಿದೆ. ಯಾರೂ ಕಡಿಮೆ ಕೆಲಸಮಾಡುತ್ತಾರೋ ಅವರಿಗೆ ಹೆಚ್ಚು ಸಂಬಳ ಸಿಗುತ್ತಿದೆ ಎಂದ ಅವರು ಸರ್ಕಾರಿ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಬಹಿರಂಗವಾಗಿ ತಿಳಿಸಿದರು.
ನಾನು ಸಹ ಬಡವರ ಮನೆಯಲ್ಲಿ ಹುಟ್ಡಿ ಬೆಳೆದವನು. ಸರ್ಕಾರಿ ನೌಕರರಿಗೆ ಆಗುತ್ತಿರುವ ಅನ್ಯಾಯದ ವ್ಯವಸ್ಥೆ ಬದಲಾಗಬೇಕಿದೆ. ನಮ್ಮಲ್ಲಿ ಇರುವ ನೌಕರರು ಯಾರೂ ಶ್ರೀಮಂತರ ಅಲ್ಲ. ಎಲ್ಲಿ ನೌಕರಿ ಸಿಕ್ಕಿಲ್ಲ. ಹಾಗಾಗಿ ಇಲ್ಲಿಗೆ ಬಂದಿದ್ದಾರೆ ಎಂದು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇನ್ನೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ/ಟಿಕೆಟ್ ದರ ಹೆಚ್ಚಳ ಮಾಡಲಾಗಿದ್ದಕ್ಕೆ ಜನರು ಶಾಪ ಹಾಕುತ್ತಿದ್ದಾರೆ.
ಜನರ ಸೇವೆಗೆ ಸಾರಿಗೆ ಸಂಸ್ಥೆಗಳು ಇವೆ. ನಮಗೆ 405 ಕೋಟಿ ರೂಪಾಯಿ ಬಾಕಿ ಹಣ ಬರಬೇಕಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ದುಡ್ಡು ಇರಲಿಲ್ಲ. ಇದೆಲ್ಲ ಕಂಡು ಬಹಳ ನೋವಾಯ್ತು ಎಂದು ತಿಳಿಸಿದ್ದಾರೆ.ಇದೆಲ್ಲ ಮನಗಂಡು ರಾಜ್ಯ ಸರ್ಕಾರ ಕೂಡಲೇ 1000 ಕೋಟಿ ಅನುದಾನ ನೀಡಬೇಕು. ನೀವು ವಿಶೇಷ ಅನುದಾನ ಬಿಡುಗಡೆ ಮಾಡದಿದ್ದರೆ, ನಾವೆಲ್ಲರು ಬದುಕುವುದಿಲ್ಲ ಎಂದು ಅವರು ನೌಕರರ ಪರ ಧ್ವನಿಯದರು.