ಬೆಂಗಳೂರು: ನೂರಕ್ಕೆ ನೂರು ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಮ್ಮ ವಿರುದ್ಧ 50 ಕೋಟಿ ಶಾಸಕರಿಗೆ ಕೊಡ್ತೀವಿ ಅನ್ನೋ ಆರೋಪ ಮಾಡಿದ್ದಾರೆ. ಮುಖ್ಯ ಮಂತ್ರಿಗಳ ಕುಟುಂಬವೇ ಭ್ರಷ್ಟಾಚಾರ ಮುಳುಗಿರುವಾಗ, ಅವರ ಕುರ್ಚಿ ಅಲುಗಾಡುತ್ತಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಂದರ್ಭ ಬಹಳ ಹತ್ತಿರವಾಗುತ್ತಿದೆ. ಅವರ ಭ್ರಷ್ಟಾಚಾರದಿಂದ ಹರಿಯಾಣ ಕಳೆದು ಕೊಂಡಿದ್ದರು. ಈಗ ಮಹಾರಾಷ್ಟ್ರ ಕೂಡ ಕಳೆದು ಕೊಳ್ಳುತ್ತಾ ಇದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಗೆ ಹೆದರೋದು ಬೇಡ. ಅವರ ಅಕ್ಕಪಕ್ಕ ಇರೋ ಹಿರಿಯ ಸಚಿವರ ಕಡೆಗೆ ಗಮನ ಕೊಟ್ರೆ ಸಾಕು ಎಂದು ಟೀಕಿಸಿದ್ರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು 100ಕ್ಕೆ 100 ರಾಜೀನಾಮೆ ಕೊಡ್ತಾರೆ. ಬೆಳಗಾವಿ ಅಧಿವೇಶನ ತನಕ ಕಾಯೋದು ಬೇಡ …ಯಾವಾಗ್ ಬೇಕಾದ್ರೂ ಕೊಡಬಹುದು ಎಂದು ಪುನರುಚ್ಛರಿಸಿದರು.