ಹಲವು ವರ್ಷಗಳ ಕಾಲ ಪ್ರೀತಿಸಿ ನಾಗಚೈತನ್ಯ ಹಾಗೂ ಸಮಂತಾ ಮದುವೆಯಾಗಿದ್ದರು. ಆದರೆ ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ಜೋಡಿ ದೂರದೂರವಾಗಿದ್ದಾರೆ. ಸಮಂತಾರಿಂದ ದೂರವಾದ ನಾಗಚೈತನ್ಯ ನಟಿ ಸೋಭಿತಾ ಧೂಳಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿದ ಭವಿಷ್ಯ ಎಲ್ಲರನ್ನು ಅಚ್ಚರಿಗೊಳಿಸಿದೆ. ವೇಣು ಸ್ವಾಮಿಯ ಭವಿಷ್ಯದಿಂದ ನಾಗಚೈತನ್ಯ ಹಾಗೂ ಶೋಭಿತಾ ಮದುವೆಯಾಗ ಬೇಕೋ ಬೇಡವೋ ಎಂಬ ಅನುಮಾನದಲ್ಲಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ನಾಗಚೈತನ್ಯ ಮತ್ತು ಸೋಭಿತಾ ದಾಂಪತ್ಯ ಜೀವನಕ್ಕೆ ಮೂರನೇ ವ್ಯಕ್ತಿ ಪ್ರವೇಶಿಸಿ ಘರ್ಷಣೆ ಸೃಷ್ಟಿಸುತ್ತಾನೆ ಎಂದು ವೇಣು ಸ್ವಾಮಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದಾಗಿ 2027ರಲ್ಲಿ ಇವರು ದೂರ ದೂರವಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಅವರು ನಾಗ ಚೈತನ್ಯ ತನ್ನ ಮೊದಲ ಪತ್ನಿ ಸಮಂತಾಗೆ ವಿಚ್ಛೇದನ ನೀಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು ಆ ಭವಿಷ್ಯ ನಿಜವಾಗಿತ್ತು.
ಇದೇ ಡಿಸೆಂಬರ್ 4 ರಂದು ಚೈತುನ್ಯ ಮತ್ತು ಸೋಭಿತಾ ವಿವಾಹವಾಗಲಿದ್ದಾರೆ ಎಂಬ ವರದಿಗಳಿವೆ. ಅದಕ್ಕೂ ಮುನ್ನ ಒಂದು ರೆಡ್ಡಿಟ್ ಪೋಸ್ಟ್ ವೈರಲ್ ಆಗುತ್ತಿದೆ. ಈ ಪೋಸ್ಟ್ನಲ್ಲಿ ಹೆಸರುಗಳನ್ನು ಉಲ್ಲೇಖಿಸದೆ, ಟಾಲಿವುಡ್ ಸ್ಟಾರ್ ಕಿಡ್ ಮತ್ತು ಬಾಲಿವುಡ್ ವೆಬ್ ಸಿರೀಸ್ ನಟಿಯನ್ನು ಉಲ್ಲೇಖಿಸಲಾಗಿದೆ. ಈ ವಿವರಣೆ ನೋಡಿದರೆ ಅದು ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ಅವರ ಬಗ್ಗೆ ಎಂದು ಅರ್ಥವಾಗುತ್ತದೆ.
ವೇಣು ಸ್ವಾಮಿ ಹೇಳಿದ್ದನ್ನ ಕೇಳಿ ಬೇರೊಬ್ಬ ಜ್ಯೋತಿಷಿಯನ್ನು ಸಂಪರ್ಕಿಸಿ ಎಂದು ನಾಗ ಚೈತನ್ಯ ತಂದೆ ನಾಗಾರ್ಜುನ ಅವರಿಗೆ ಹೇಳಲಾಗಿತ್ತು.. ವೇಣು ಸ್ವಾಮಿ ಹೇಳಿದ್ದನ್ನೇ ಆ ಜ್ಯೋತಿಷಿಯೂ ಹೇಳಿದ್ದರಿಂದ ಈ ಮದುವೆ ಬಗ್ಗೆ ಮತ್ತೊಮ್ಮೆ ಯೋಚಿಸಲು ಚೈತನ್ಯ ಪೋಷಕರು ನಿರ್ಧರಿಸಿದ್ದಾರೆ ಎಂದು ಈ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಆ ಪೋಸ್ಟ್ ನೋಡಿ ಎಲ್ಲರೂ ಈ ಜೋಡಿ ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ಎಂದೇ ಭಾವಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಈ ಸುದ್ದಿ ನಿಜವಾಗಬಹುದು ಎಂದು ಕೆಲವರು ಹೇಳಿದರೇ, ಇನ್ನು ಕೆಲವರು ಇದು ಸುಳ್ಳು ಸುದ್ದಿ ಎನ್ನುತ್ತಾರೆ..
ಚೈತನ್ಯ ಮತ್ತು ಸೋಭಿತಾ ನಿಶ್ಚಿತಾರ್ಥದ ನಂತರ ವೇಣು ಸ್ವಾಮಿ ನೀಡಿದ ಜಾತಕ ವೈರಲ್ ಆಗಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಬೇರೆಯವರ ಖಾಸಗಿ ಬದುಕಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯೇ ಎಂದು ಜನ ಪ್ರಶ್ನಿಸಿದ್ದಾರೆ. ವೇಣು ಸ್ವಾಮಿ ಅವರ ಹೇಳಿಕೆ ವಿರುದ್ಧ ಟಿಎಫ್ಜೆಎ ದೂರು ದಾಖಲಿಸಿದೆ. ಈ ಹಿಂದೆಯೂ ಇತರ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಕೆಟ್ಟ ಭವಿಷ್ಯ ನುಡಿದಿದ್ದರು ಎಂದು ಟಿಎಫ್ಜೆಎ ತನ್ನ ದೂರಿನಲ್ಲಿ ತಿಳಿಸಿದೆ. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಬಗ್ಗೆ ಮಾಡಿದ ಕಾಮೆಂಟ್ಗಳಿಗೆ ಭಾರೀ ಟೀಕೆಗೆ ಗುರಿಯಾದ ನಂತರ, ವೇಣು ಸ್ವಾಮಿ ತಮ್ಮ ವೀಡಿಯೊವನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ. ಯಾವುದೇ ಸೆಲೆಬ್ರಿಟಿಗಳ ಜಾತಕವನ್ನು ಸಾರ್ವಜನಿಕವಾಗಿ ಹೇಳುವುದಿಲ್ಲ ಎಂದು ಘೋಷಿಸಿದ್ದಾರೆ.