ಅಘೋರಿಗಳ ನಿಗೂಢ ಜಗತ್ತಿನಲ್ಲಿ ಎಷ್ಟೇ ಅಧ್ಯಯನ ಮಾಡಿದರೂ ಅವರ ಕುರಿತು ಸಂಪೂರ್ಣವಾಗಿ ತಿಳಿಯಲು ಆಗುವುದಿಲ್ಲ. ಅಗೆದಂತೆ ಹೆಚ್ಚು ರಹಸ್ಯಗಳು ಮತ್ತು ರೋಚಕತೆಗಳು ಹೊರಬರುತ್ತವೆ. ದೇಹವನ್ನು ಬೂದಿಯಿಂದ ಮುಚ್ಚಿಕೊಳ್ಳುವ ಅಘೋರಿಗಳು ಕೆಲವೊಮ್ಮೆ ಮೃತ ದೇಹಗಳ ಮಾಂಸವನ್ನು ತಿನ್ನುತ್ತಾರೆ, ಇನ್ನೂ ಕೆಲವೊಮ್ಮೆ ಅವುಗಳೊಂದಿಗೆ ಸಂಭೋಗಿಸುತ್ತಾರೆ ಎಂದು ಹೇಳಲಾಗುತ್ತದೆ.
ಅಘೋರಿಗಳ ಆಚರಣೆ ತುಂಬಾ ವಿಭಿನ್ನವಾಗಿದೆ. ಹಾಗಾಗಿ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಏಕೆಂದರೆ ಅವರ ಜೀವನ, ಜೀವನ ಪರಿಸ್ಥಿತಿಗಳು ಮತ್ತು ಅವರು ಏನು ಮಾಡುತ್ತಾರೆ ಎಂಬುದು ನಿಗೂಢವಾಗಿದೆ.
ಅಘೋರಿ ಎಂದರೆ ಸಂಸ್ಕೃತದಲ್ಲಿ ಬೆಳಕಿನ ಕಡೆಗೆ ಎಂದರ್ಥ. ಈ ಪದವು ಶುದ್ಧ ಮತ್ತು ಎಲ್ಲಾ ದುಷ್ಟರಿಂದ ಮುಕ್ತವಾಗಿದೆ ಎಂದು ಪರಿಗಣಿಸಲಾಗಿದೆ. ಆದರೆ ಈ ಜನರು ವಾಸಿಸುತ್ತಾರೆ ಮತ್ತು ವಿಭಿನ್ನವಾಗಿ ಕಾಣುತ್ತಾರೆ. ಅವರ ಜೀವನ ಕ್ಕೆ ಸಂಬಂಧಿಸಿದ ಕೆಲವು ನಿಗೂಢ ವಿಷಯಗಳನ್ನು ತಿಳಿಯೋಣ.
ಅಘೋರಿಗಳು ಶಿವನನ್ನು ಮಾತ್ರವಲ್ಲ, ಶಕ್ತಿಯನ್ನು ಕೂಡ ಪೂಜಿಸುತ್ತಾರೆ. ಕೆಟ್ಟ ಸಂದರ್ಭಗಳಲ್ಲಿಯೂ ದೇವರಿಗೆ ಶರಣಾಗುವುದು ಪೂಜೆಯ ಸುಲಭ ಮಾರ್ಗ ಎಂದು ಅವರು ಹೇಳುತ್ತಾರೆ. ಅದಕ್ಕಾಗಿಯೇ ಅವರು ಮೃತ ದೇಹಗಳೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರುತ್ತಾರೆ. ಅಷ್ಟು ಮಾತ್ರವಲ್ಲ, ಅವರು ಮೃತ ದೇಹಕ್ಕೆ ಪೂಜೆಯನ್ನು ಕೂಡ ಮಾಡುತ್ತಾರೆ. ಮೃತ ದೇಹದೊಂದಿಗೆ ದೈಹಿಕ ಸಂಬಂಧವನ್ನು ಹೊಂದುವ ರೀತಿಯನ್ನು ಅವರು ಶಿವ ಮತ್ತು ಶಕ್ತಿಯ ಆರಾಧನೆ ಮಾರ್ಗವೆಂದು ಹೇಳುತ್ತಾರೆ.
ಮೃತ ದೇಹದೊಂದಿಗೆ ದೈಹಿಕ ಚಟುವಟಿಕೆಯನ್ನು ಮಾಡುವಾಗ, ಮನಸ್ಸು ದೇವರ ಭಕ್ತಿಯಲ್ಲಿ ಲೀನವಾಗುತ್ತದೆ ಎಂಬುದು ಅವರಲ್ಲಿನ ನಂಬಿಕೆಯಾಗಿದೆ. ಮೃತದೇಹದ ಮೇಲೆ ಬೂದಿಯನ್ನು ಹಚ್ಚಿ, ಮಂತ್ರಗಳನ್ನು ಪಠಿಸುತ್ತಾ, ಡೋಲು ಬಾರಿಸುತ್ತಾ ದೈಹಿಕ ಸಂಪರ್ಕಕ್ಕೆ ಬರುತ್ತಾರೆ. ಋತುಮತಿಯಾದ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದುವುದರಿಂದ ಅಘೋರಿಗಳ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಇತರ ಸಾಧುಗಳಂತೆ, ಅಘೋರಿಗಳು ಬ್ರಹ್ಮಚರ್ಯವನ್ನು ಅನುಸರಿಸುವುದಿಲ್ಲ. ಅವರು ಮೃತ ದೇಹಗಳೊಂದಿಗೆ ಮಾತ್ರವಲ್ಲದೆ ಜೀವಂತ ಜನರೊಂದಿಗೂ ದೈಹಿಕ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ.
ಅಘೋರಿಗಳು ಶಿವನನ್ನು ತಮ್ಮ ಮುಖ್ಯ ದೇವನನ್ನಾಗಿ ಆರಾಧಿಸುತ್ತಾರೆ. ಅವನ ಭಕ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುತ್ತಾರೆ. ಅಘೋರಿಯು ಶಿವನ ಐದು ರೂಪಗಳಲ್ಲಿ ಒಂದಾಗಿದೆ. ಶಿವನನ್ನು ಪೂಜಿಸಲು, ಈ ಅಘೋರಿಗಳು ಮೃತದೇಹದ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಇದು ಶಿವನ ಆಶೀರ್ವಾದ ಪಡೆಯಲು ಅಘೋರ ಪಂಥದ ವಿಶೇಷ ವಿಧಾನವಾಗಿದೆ
ಅಘೋರಿಗಳು ಮೂರು ವಿಧಾನಗಳ ಮೂಲಕ ಅಂತ್ಯಕ್ರಿಯೆಯನ್ನು ಮಾಡುತ್ತಾರೆ. ಮೊದಲನೇಯದಾಗಿ ಮೃತ ದೇಹಕ್ಕೆ ಮಾಂಸ ಮತ್ತು ಮದ್ಯವನ್ನು ಅರ್ಪಿಸುವ ಮೂಲಕ ಅಂತ್ಯಕ್ರಿಯೆ ಮಾಡಲಾಗುವುದು. ಎರಡನೇಯದಾಗಿ ಮೃತದೇಹದ ಮೇಲೆ ಕಾಲು ಇಟ್ಟು ತಪಸ್ಸು ಮಾಡುವ ಮೂಲಕ ಅಂತ್ಯಕ್ರಿಯೆ ಮಾಡುವುದು. ಮೂರನೇಯದಾಗಿ ಸ್ಮಶಾನದಲ್ಲಿ ಹೋಮವನ್ನು ಮಾಡುವ ಮೂಲಕ ಅಂತ್ಯಕ್ರಿಯೆ ಮಾಡುವುದು. ಸಾಮಾನ್ಯ ಜನರಿಗೆ ಅಘೋರಿಗಳ ಈ ಕ್ರಮಗಳು ವಿಚಿತ್ರವೆನಿಸಬಹುದು ಅಥವಾ ಅಸಹ್ಯವೆನಿಸಬಹುದು. ಆದರೆ ಅಘೋರಿಗಳಿಗೆ ಇದು ಆಧ್ಯಾತ್ಮಿಕ ಅಭ್ಯಾಸದ ಒಂದು ಭಾಗವಾಗಿದೆ.
Salman Khan: ನಟ ಸಲ್ಮಾನ್ ಖಾನ್ʼಗೆ ಜೀವ ಬೆದರಿಕೆ: ರಾಯಚೂರಿನ ಯುವಕ ಅರೆಸ್ಟ್
ಅಘೋರಿಗಳು ಶಿವನನ್ನು ಹೊರತುಪಡಿಸಿ ಬೇರೆ ಯಾವುದೇ ದೇವರನ್ನು ನಂಬುವುದಿಲ್ಲ. ಅವರು ಯಾರನ್ನೂ ದ್ವೇಷಿಸುವುದಿಲ್ಲ. ನಾಯಿಗಳನ್ನು ಬಿಟ್ಟರೆ ಹಸು, ಕೋಳಿ ಮುಂತಾದ ಯಾವುದೇ ಪ್ರಾಣಿಗಳನ್ನು ಸಾಕುವುದಿಲ್ಲ. ಕೆಲವು ದೇವಾಲಯಗಳು ಅಘೋರಿಗಳಿಗೆ ವಾಸಿಸುವ ಸ್ಥಳವಾಗಿ ಮಾರ್ಪಟ್ಟಿದೆ. ಮೊದಲು ಕಾಶಿಯಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಈ ಅಘೋರಿಗಳು ಈಗ ದೇಶದ ಹಲವು ಭಾಗಗಲ್ಲಿ ಕಾಣಸಿಗುತ್ತಾರೆ.
ಅಘೋರಿಗಳು ಮೃತದೇಹದೊಂದಿಗೆ ದೈಹಿಕ ಸಂಬಂಧವನ್ನು ಇಟ್ಟುಕೊಳ್ಳುವುದರಿಂದ ಅವರ ಶಕ್ತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ ಹಾಗೂ ಶಿವನಿಗೆ ಹತ್ತಿರವಾಗುತ್ತೇವೆ ಎಂಬುದು ಅವರಲ್ಲಿನ ನಂಬಿಕೆಯಾಗಿದೆ.