ಕಾಲಿವುಡ್ನ ಖ್ಯಾತ ನಟ ನೆಪೋಲಿಯನ್ ಮಗ ಧನುಷ್ ವಿವಾಹವನ್ನು ನ. 7ರಂದು ಜಪಾನ್ನಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಧನುಷ್ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಾಗಲೇ ತಮಿಳುನಾಡಿನ ಖ್ಯಾತ ಸಾಮಾಜಿಕ ಕಾರ್ಯಕರ್ತ ಕೃಷ್ಣವೇಲ್ ನೀಡಿರುವ ಹೇಳಿಕೆಗಳು ಭಾರಿ ಚರ್ಚೆಗೆ ಕಾರಣವಾಗಿದೆ.
ನೆಪೋಲಿಯನ್ ಮಗನಿಗೆ ನಡೆದ ಮದುವೆ ಒಂದು ಕೈಗೊಂಬೆ ಮದುವೆ ಎಂದು ಕೃಷ್ಣವೇಲ್ ಟೀಕಿಸಿದ್ದಾರೆ.
ನೆಪೋಲಿಯನ್ ಪುತ್ರ ಧನುಷ್ ಹಾಗೂ ಅಕ್ಷಯ ಮದುವೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಸ್ಕ್ಯುಲರ್ ಡಿಸ್ಟ್ರೋಫಿ ಎಂಬ ಕಾಯಿಲೆಯಿಂದ ಬಳಲುತ್ತಿರುವ ಧನುಷ್, ಜೀವನವಿಡಿ ಎದ್ದು ನಡೆಯಲಾಗದಂತಹ ಸ್ಥಿತಿಯಲ್ಲಿದ್ದಾರೆ. ಯಾವಾಗಲೂ ಕುರ್ಚಿಯ ಆಸರೆ ಇರಬೇಕು. ಹೀಗಿರುವಾಗ ಧನುಷ್, ವೈವಾಹಿಕ ಜೀವನ ನಡೆಸುವುದು ಸಾಧ್ಯವೇ? ಹಣಕ್ಕಾಗಿ ಈ ಹೆಣ್ಣು ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾಳೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಆರಂ ನಾಡು ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿರುವ ರಾಜಕೀಯ ವಿಮರ್ಶಕ ಹಾಗೂ ಸಾಮಾಜಿಕ ಕಾರ್ಯಕರ್ತ ಕೃಷ್ಣವೇಲ್, ಈ ಮಹಿಳೆಯನ್ನು ನೆಪೋಲಿಯನ್ ಪುತ್ರ ಧನುಷ್ ಮದುವೆಯಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಮದುವೆ ಯಾವುದಕ್ಕಾಗಿ? ಪುರುಷರು ಮತ್ತು ಮಹಿಳೆಯರು ಇಬ್ಬರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂತೋಷದಿಂದ ಬದುಕಲು ಮದುವೆಯಾಗುತ್ತಾರೆ. ಕೆಲವರ ಪ್ರಕಾರ ದೈಹಿಕ ಅಗತ್ಯಗಳಷ್ಟೇ ಜೀವನವಲ್ಲ, ಎರಡು ಮನಸ್ಸು ಸೇರಿದರೆ ಮಾತ್ರ ಜೀವನ ಎನ್ನುತ್ತಾರೆ. ಆದರೆ, ಈ ಮಾತುಗಳು ಸಿನಿಮಾಗೆ ಮಾತ್ರ ಸೀಮಿತ. ಇದೆಲ್ಲ ಸಿನಿಮಾದಲ್ಲಿ ಸಾಧ್ಯ. ಇದು ನಿಜ ಜೀವನಕ್ಕೆ ಸಾಧ್ಯವಿಲ್ಲ ಎಂದು ಕೃಷ್ಣವೇಲ್ ಹೇಳಿದ್ದಾರೆ.
ಎದ್ದು ನಡೆಯಲು ಸಾಧ್ಯವಾಗದ ಅಂಗವಿಕಲನಿಗೆ ಆರೈಕೆ ಮಾಡಲು ನರ್ಸ್ ಮಾತ್ರ ಬೇಕೆ ಹೊರತು ಹೆಂಡತಿಯಲ್ಲ. ದೊಡ್ಡ ಐಟಿ ಕಂಪನಿಯನ್ನು ನಡೆಸುತ್ತಿರುವ ನೆಪೋಲಿಯನ್ ಇದನ್ನು ಏಕೆ ಒಪ್ಪಿಕೊಳ್ಳುವುದಿಲ್ಲ? ಯಾಕೆ ಬೇಕಿತ್ತು ಈ ಆಟಿಕೆ ಮದುವೆ? ಈ ಮದುವೆಯಿಂದ ಏನು ಪ್ರಯೋಜನ? ಹೆಣ್ಣಿನ ಬದುಕನ್ನು ಹಾಳು ಮಾಡುವುದು ಯಾವ ರೀತಿಯಲ್ಲಿ ನ್ಯಾಯ? ಹೆಣ್ಣಿನ ಒಪ್ಪಿಗೆ ಮೇರೆಗೆ ಮದುವೆ ನಡೆದಿದೆ ಎನ್ನುತ್ತಾರೆ. ಮೊದಲನೆಯದಾಗಿ ಮಹಿಳೆ ಸ್ವಯಂಪ್ರೇರಣೆಯಿಂದ ಈ ಮದುವೆಗೆ ಒಪ್ಪಿಗೆ ನೀಡಿದ್ದಾರೆಯೇ? ಇಲ್ಲೇನಾದರೂ ಬಲವಂತ ನಡೆದಿದೆಯೇ ಅಥವಾ ಯಾವುದೇ ಸಂದಿಗ್ಧತೆಯಲ್ಲಿದೆಯೇ ಎಂದು ನೋಡಬೇಕಿದೆ ಎಂದು ಕೃಷ್ಣವೇಲ್ ಹೇಳಿದ್ದಾರೆ. ಇದೊಂದು ಕೈಗೊಂಬೆಯ ಮದುವೆಯಾಗಿದ್ದು, ಪತ್ನಿಯನ್ನು ನರ್ಸ್ ಆಗಿ ಇಟ್ಟುಕೊಳ್ಳುವ ಮಹಾ ಪ್ಲಾನ್ ಎಂದಿದ್ದಾರೆ.
ಆ ಹುಡುಗಿ ಅಕ್ಷಯಾಗೆ ಧನುಷ್ ಜೊತೆ ಮಾತನಾಡಲೂ ಆಗುತ್ತಿಲ್ಲ. ಮಾತನಾಡುವವರೇ ಇಲ್ಲದಿದ್ದಾಗ ಯಾಕೆ ಈ ಮದುವೆ? ಈ ಮದುವೆ ಮೂಲಕ ನೆಪೋಲಿಯನ್ ಏನು ಸಾಧಿಸಿದ? ಅಲ್ಲದೇ ಮದುವೆ ಆಗಿದ್ದಕ್ಕೆ ಅಕ್ಷಯಾಗೆ ಕೋಟಿಗಟ್ಟಲೆ ಆಸ್ತಿ ಬರೆದುಕೊಡಲಾಗಿದೆ ಎನ್ನಲಾಗಿದೆ. ಆ ಆಸ್ತಿಯನ್ನು ಆ ಹುಡುಗಿ ಏನು ಮಾಡಬಲ್ಲಳು? ನೆಪೋಲಿಯನ್ ಇಂತಹ ಮದುವೆ ಮಾಡುವ ಬದಲು, ತಮಿಳುನಾಡಿನಲ್ಲಿ ವಿಕಲಾಂಗರಿಗಾಗಿ ಒಂದು ಕೇಂದ್ರವನ್ನು ಪ್ರಾರಂಭಿಸಬಹುದು ಅಥವಾ ಧನುಷ್ ಹೆಸರಿನಲ್ಲಿ ಪ್ರತಿಷ್ಠಾನವನ್ನು ಪ್ರಾರಂಭಿಸಬಹುದು. ಹಾಗೆ ಮಾಡಿದರೆ ನೆಪೋಲಿಯನ್ ಮಗನ ಹೆಸರು ಹತ್ತು ತಲೆಮಾರುಗಳವರೆಗೆ ಮಾತನಾಡುತ್ತದೆ ಎಂದು ಕೃಷ್ಣವೇಲ್ ಹೇಳಿದ್ದಾರೆ.