ಬೆಂಗಳೂರು : ಬೆಂಗಳೂರಿನ ಬದುಕು ಬಲು ದುಬಾರಿ,, ಇಲ್ಲಿ ಜೀವನ ನಡೆಸೋದ್ ಹೇಗ್ ಸ್ವಾಮಿ ಅನ್ನೋದೇ ಎಲ್ಲರ ಪ್ರಶ್ನೆ.. ಊಟ, ಬಟ್ಟೆ, ಹಣ್ಣು ತರಕಾರಿ, ದಿನಸಿ, ಪೆಟ್ರೋಲ್, ಡೀಸೇಲ್ ಹೀಗೆ ಎಲ್ಲವೂ ತುಟ್ಟಿಯಾಗಿದೆ. ಅಂಥದ್ದರಲ್ಲಿ ಇದರ ಮಧ್ಯೆಯೇ ನಗರವಾಸಿಗಳ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ಹೌದು, ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರಿಗೆ ಸೆಸ್ ವಿಧಿಸಲು ಮುಂದಾಗಿದೆ. ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ಸೆಸ್ ವಿಧಿಸಲು ಚಿಂತನೆ ನಡೆಸಿದೆ.
ಅಂಬರೀಶ್ ಮನೆಗೆ ಮುದ್ದು ಮಗುವಿನ ಆಗಮನ: ಗಂಡು ಮಗುವಿನ ಫೋಷಕರಾದ ಅಭಿಷೇಕ್, ಅವಿವಾ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಅಪಾರ್ಟಮೆಂಟ್ ಗಳು, ಹೋಟೆಲ್ ಮತ್ತು ಮಾಲ್ ಗಳು ಪ್ರತಿನಿತ್ಯ 100 ಕೆಜಿಗೂ ಅಧಿಕ ತ್ಯಾಜ್ಯವನ್ನು ಉತ್ಪಾದಿಸಿ, ಪಾಲಿಕೆ ಕಾಂಪ್ಯಾಕ್ಟರ್ ಗಳಿಗೆ ಕಳಿಸುತ್ತಿವೆ. ಹೀಗಾಗಿ ಕಸ ಸಂಗ್ರಹ ವ್ಯವಸ್ಥೆಯ ಮೇಲೆ ಹೊರೆಯಾಗುತ್ತಿದ್ದು, ಇದನ್ನು ನಿಯಂತ್ರಿಸಲು ಉದ್ದೇಶಿತ ಸೆಸ್ ಪ್ರಸ್ತಾವನ್ನು ಸರ್ಕಾರದ ಮುಂದಿಟ್ಟಿದ್ದೇವೆ ಎಂದರು. 6 ತಿಂಗಳ ಹಿಂದೆಯೇ ಸಗಟು ತ್ಯಾಜ್ಯ ಉತ್ಪಾದಕರಿಗೆ ನೋಟಿಸ್ ನೀಡಲಾಗಿತ್ತು. ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಕ್ರಮ ಕೈಗೊಳ್ಳದ ಕಾರಣ ಸ್ವಂತ ವ್ಯವಸ್ಥೆ ಮಾಡಿಕೊಳ್ಳದ ಸಗಟು ತ್ಯಾಜ್ಯ ಉತ್ಪಾದಕರಿಂದ ಕಸ ಸಂಗ್ರಹಿಸಿಲು ಪ್ರತಿ ಕೆ.ಜಿ.ಗೆ 12 ರೂಪಾಯಿ ನಿಗದಿಪಡಿಸಲಾಗಿದೆ ಎಂದರು.