ಬೆಂಗಳೂರು: ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಪರಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮದ್ಯ ಮಾರಾಟಗಾರರ ಸಂಘ ಗಂಭೀರ ಆರೋಪ ಮಾಡಿದೆ. ಸುಮಾರು 500 ಕೋಟಿ ರೂ. ನಷ್ಟು ಹಣವನ್ನು ಅಬಕಾರಿ ಸಚಿವರು ವಸೂಲಿ ಮಾಡಿದ್ದಾರೆ. ಒಟ್ಟು 700 ಕೋಟಿ ರೂ. ನಷ್ಟು ವಸೂಲಿ ಆಗಿದೆ. ಭ್ರಷ್ಟಾಚಾರ ಫ್ರೂವ್ ಮಾಡಿದ್ರೆ ಸಿಎಂ ರಾಜಕೀಯ ನಿವೃತ್ತಿ ಎಂದಿದ್ದಾರೆ. ಅಂದು 40 ಪರ್ಸೆಂಟ್ ಆರೋಪ ಮಾಡಿದ್ದ ಕಾಂಗ್ರೆಸ್ ಅದನ್ನು ಪ್ರೂವ್ ಮಾಡಿದ್ಯಾ ?, ಗುತ್ತಿಗೆದಾರರ ಆರೋಪವನ್ನ ಸತ್ಯ ಎಂದಿದ್ದ ಕಾಂಗ್ರೆಸ್, ಈಗ ಈಗ ವೈನ್ ಮರ್ಚಂಟ್ಸ್ ಆರೋಪ ಯಾಕೆ ಒಪ್ಪಲ್ಲ ಎಂದು ಪ್ರಶ್ನಿಸಿದ್ರು.
ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ, ಅದನ್ನು ಮರೆ ಮಾಚಲು ಪ್ರಯತ್ನಮಾಡುತ್ತಿದ್ದಾರೆ. ಹೊಸ ಮದ್ಯದಂಗಡಿಗೆ ಲೈಸೆನ್ಸ್ ಪಡೆಯಲು 70-80 ಲಕ್ಷ ಕೊಡಬೇಕು. ಪ್ರತಿ ವರ್ಷ ರಿನಿವಲ್ ಗೆ 4 ಲಕ್ಷ ಲಂಚ ಸೇರಿ 6 ಲಕ್ಷ ಕೊಡಬೇಕು. ಬಾರ್ & ರೆಸ್ಟೋರೆಂಟ್ ಅಥವಾ ಯಾವುದೇ ಮದ್ಯದಂಗಡಿ ಮೇಲೆ ವರ್ಷಕ್ಕೆ ಎರಡು ಕೇಸ್ ಫಿಕ್ಸ್ ಆಗಿದೆ. ತಪ್ಪು ಮಾಡದೆ ಇದ್ರೂ ಕೇಸ್ ಹಾಕ್ತಾರೆ. ಹೊಸ ಲೈಸೆನ್ಸ್ ಕೊಡಬೇಕಾ ಬೇಡ್ವಾ ಅನ್ನೋದಷ್ಟೆ ಸಚಿವರ ಕೆಲಸವಾಗಿದೆ. ಆದರೆ ಇವರು ವರ್ಗಾವಣೆಗೆ ದರ ನಿಗದಿ ಮಾಡಿದ್ದಾರೆ. ಭ್ರಷ್ಟಾಚಾರದ ಹಣವನ್ನ ಚುನಾವಣೆಗೆ ಬಳಸಿದ್ದಾರೆ. ವೈನ್ ಮರ್ಚಂಟ್ಸ್ ನವರೇ ಭ್ರಷ್ಟಾಚಾರವನ್ನು ಫ್ರೂವ್ ಮಾಡಿದ್ದಾ. ಹೀಗಾಗಿ ಸಚಿವ ತಿಮ್ಮಾಪುರ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ರು.