ಗ್ಕೆಬರ್ಹಾ: ಟ್ರಿಸ್ಟನ್ ಸ್ಟಬ್ಸ್ ಅಮೋಘ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾ ವಿರುದ್ಧ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.
ರ್ನಿಂಗ್ ಸಿಕ್ಕಿದ್ದೆಲ್ಲಿ?
ಟೀಂ ಇಂಡಿಯಾ ಸ್ಪಿನ್ನರ್ ವರುಣ್ ಚಕ್ರವರ್ತಿ 13ನೇ ಓವರ್ನಲ್ಲಿ ಬೌಲಿಂಗ್ನಲ್ಲಿದ್ದರು. ಮೊದಲ ಎರಡು ಎಸೆತಗಳಲ್ಲಿ ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ದೈತ್ಯ ಆಟಗಾರರಿಗೆ ಪೆವಿಲಿಯನ್ ದಾರಿ ತೋರಿದರು. ಇದರಿಂದ ಭಾರತದ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದ್ರೆ ಕೊನೇ ಮೂರು ಓವರ್ಗಳಲ್ಲಿ ಟ್ರಿಸ್ಟನ್ ಸ್ಟಬ್ಸ್ ಹಾಗೂ ಜೆರಾಲ್ಡ್ ಕೋಟ್ಜಿ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನವು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಯಿತು.
ಕ್ಯಾರೆಟ್ ಬೆಳೆ ಹರಿಸುತ್ತೆ ಹಣದ ಹೊಳೆ: ಕ್ಯಾರೆಟ್ ಕೃಷಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಈ ಜೋಡಿ 17,18,19ನೇ ಓವರ್ನಲ್ಲೇ ಕ್ರಮವಾಗಿ 12, 12, 16 ರನ್ ಚಚ್ಚಿದ್ದರ ಪರಿಣಾಮ ಗೆಲುವು ದಕ್ಷಿಣ ಆಫ್ರಿಕಾದ ಪಾಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 19 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ ಗೆಲುವಿನ ನಗೆ ಬೀರಿತು. ದಕ್ಷಿಣ ಆಫ್ರಿಕಾ ಪರ ಟ್ರಿಸ್ಟನ್ ಸ್ಟಬ್ಸ್ ಅಜೇಯ 47 ರನ್, ರೀಝಾ ಹೆಂಡ್ರಿಕ್ಸ್ 24 ರನ್, ಜೆರಾಲ್ಡ್ ಕೋಟ್ಜಿ ಅಜೇಯ 19 ರನ್, ರಿಯಾನ್ ರಿಕ್ಲೆಂಟನ್ 13 ರನ್ ಗಳಿಸಿದರು.