ಮಗುವಿನ ಮೆದುಳು ಬೆಳವಣಿಗೆಗೆ ನಿದ್ರೆ ತುಂಬಾನೇ ಮುಖ್ಯ. ಚಿಕ್ಕ ಮಗುವಿನ ನಿದ್ರೆಯನ್ನು ಹಾಳು ಮಾಡಬೇಡಿ ಎಂದು ನ್ಯಾಷನಲ್ ಅಕಾಡೇಮಿ ಆಫ್ ಸೈನ್ಸ್ ಎಚ್ಚರಿಕೆ ನೀಡಿದೆ. ಕಳಪೆ ಗುಣಮಟ್ಟದ ನಿದ್ರೆ ಮಗುವಿನ ಮೆದುಳಿಗೆ ಹಾನಿಕಾರಕ. ನಿದ್ರೆಯಲ್ಲಿ ಆಗುವ ಅಡಚಣೆ ಅವರ ಕಲಿಕೆ ಮತ್ತು ಸ್ಮರಣೆಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಜೊತೆಗೆ ನರಮಂಡಲದ ಬೆಳವಣಿಗೆ ಮೇಲೂ ಪರಿಣಾಮ ಬೀರಲಿದೆ ಎಂದು ಉತ್ತರ ಕೆರೊಲಿನಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗ್ರಹಾಂ ಡಿಯರಿಂಗ್ ವಾರ್ನಿಂಗ್ ಮಾಡಿದ್ದಾರೆ. ಗ್ರಹಾಂ ಡಿಯರಿಂಗ್ ನೇತೃತ್ವದ ತಂಡವು ಅಧ್ಯಯನ ನಡೆಸಿ ತನ್ನ ವರದಿಯನ್ನು ಪ್ರಕಟಿಸಿದೆ.
ಪರಶುರಾಮ ಥೀಮ್ ಪಾರ್ಕ್ ಅಕ್ರಮ: ತಲೆಮರೆಸಿಕೊಂಡಿದ್ದ ಶಿಲ್ಪಿ ಕೃಷ್ಣ ನಾಯಕ್ ಅರೆಸ್ಟ್.!
ವಯಸ್ಕರಿಗೆ ನಿದ್ರೆ ನಿರ್ವಹಣೆ ಮತ್ತು ದುರಸ್ತಿಗೆ ಅಗತ್ಯವಾಗಿದೆ. ಆದರೆ ಮಕ್ಕಳಿಗೆ ಅವರ ಬೆಳವಣಿಗೆಗೆ ಬಹಳ ಮುಖ್ಯ. ಮೆದುಳಿನ ಬೆಳವಣಿಗೆಗೆ ಮತ್ತು ಸಿನಾಪ್ಟಿಕ್ ಸಂಪರ್ಕಗಳನ್ನು ಬಲಪಡಿಸಲು ಅವಶ್ಯಕವಾಗಿದೆ. ಸಂಶೋಧಕರು ಇಲಿಗಳ ಮೇಲೆ ಪರೀಕ್ಷೆ ನಡೆಸಿದ್ದಾರೆ. ಕಳಪೆ ನಿದ್ರೆಯ ಪರಿಣಾಮವು ವಯಸ್ಕರಿಗಿಂತ ಯುವ ಇಲಿಗಳ ಮೆದುಳಿನ ಮೇಲೆ ಹೆಚ್ಚು ಬೀರುತ್ತದೆ ಅನ್ನೋದನ್ನು ಕಂಡುಕೊಂಡಿದ್ದಾರೆ. ಆ ಮೂಲಕ ಮಕ್ಕಳ ಮೆದುಳು ನಿದ್ರೆಯ ಕೊರತೆಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಅನ್ನೋದನ್ನು ತಿಳಿದುಕೊಂಡಿದ್ದಾರೆ.
ಮಕ್ಕಳಲ್ಲಿ ನಿದ್ರಾಭಂಗ ಮತ್ತು ನರಗಳ ಬೆಳವಣಿಗೆ ಮೇಲೂ ಪರಿಣಾಮ ಬೀರಲಿದೆ ಅಂತಾ ಅಧ್ಯಯನ ಹೇಳಿದೆ. ಸಂಶೋಧಕರು ಇಲಿಗಳನ್ನು ಪರೀಕ್ಷಿಸಿದಾಗ ನಿದ್ರೆಯ ಕೊರತೆಯು ಮೆದುಳಿನಲ್ಲಿರುವ ಕ್ಯಾಸ್ ಪ್ರೋಟೀನ್ಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುವುದನ್ನು ಕಂಡುಕೊಂಡಿದ್ದಾರೆ. ಇದು ಕಲಿಕೆ ಮತ್ತು ಸ್ಮರಣೆಗೆ ಅವಶ್ಯಕವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.