ಜ್ಯೋತಿಷ್ಯದಲ್ಲಿ, ಶನಿಯನ್ನು ಕ್ರೂರ, ಪಾಪ ಮತ್ತು ಹಾನಿಕಾರಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಶನಿಯನ್ನು ಕರ್ಮದ ಗ್ರಹ ಎಂದೂ ಕರೆಯುತ್ತಾರೆ. ಶನಿಯು ಅಶುಭ ಗ್ರಹ ಎಂಬ ನಂಬಿಕೆ ಜನರಲ್ಲಿದೆ. ಮತ್ತು ಶನಿಯ ಕೋಪಕ್ಕೊಳಗಾದರೆ ಮಾಡಿದ ಕೆಲಸಗಳು ಸಹ ಹಾಳಾಗುತ್ತವೆ. ಇತರ ಗ್ರಹಗಳು ಶುಭವಾಗಿದ್ದರೂ, ಶನಿ ಮಾತ್ರ ಕೆಟ್ಟ ಸ್ಥಾನದಲ್ಲಿದ್ದರೆ ಸಮಸ್ಯೆ ಹೆಚ್ಚಾಗುತ್ತಾ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ ನೋಡಿ.
E-Shram Card: ಇ-ಶ್ರಮ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ಬಿಪಿಎಲ್ ಕಾರ್ಡ್ ವಿತರಣೆ.!
ಭಕ್ತರು ಶನಿವಾರದಂದು ಶನಿ ದೇವರನ್ನು ಪೂಜಿಸುತ್ತಾರೆ. ಶನಿವಾರವನ್ನು ಅವನ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ನಿರ್ದಿಷ್ಟ ವಿಧಿ ವಿಧಾನಗಳ ಮೂಲಕ, ವ್ಯಕ್ತಿಗಳು ಶನಿ ದೇವರನ್ನು ಸಮಾಧಾನಪಡಿಸಬಹುದು ಮತ್ತು ನಿರಂತರ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು
ಶನಿವಾರ ದಿನದಂದು ಕೈಗೊಳ್ಳುವ ಕೆಲವು ಸರಳ ಕ್ರಮಗಳು ನಿಮಗೆ ಅಪೇಕ್ಷಿತ ಸಂಪತ್ತು, ಸಂತೋಷ – ಸಮೃದ್ಧಿ, ಉದ್ಯೋಗವನ್ನು ಕರುಣಿಸಿ, ಶನಿ ದೋಷದಿಂದ ಮುಕ್ತಿ ನೀಡಿ ನಿಮ್ಮ ಅದೃಷ್ಟವನ್ನು ಬೆಳಗಿಸಬಹುದು, ಜೊತೆಗೆ ನೀವು ಜೀವನದಲ್ಲಿ ಉತ್ತಮ ಮತ್ತು ಮಂಗಳಕರ ಫಲಿತಾಂಶಗಳನ್ನು ಪಡೆಯಲು ಸಹಕರಿಸಬಹುದು. ಶನಿವಾರದಂದು ಮಾಡಬಹುದಾದ ಅತ್ಯಂತ ಸರಳ ಪರಿಹಾರಗಳು ಹೀಗಿವೆ ನೋಡಿ..
ಅದೃಷ್ಟವನ್ನು ಬೆಳಗಿಸಲು, ಶನಿವಾರ ಸಂಜೆ ಕಪ್ಪು ನಾಯಿ ಅಥವಾ ಕಪ್ಪು ಹಸುವಿಗೆ ರೊಟ್ಟಿಯನ್ನು ತಿನ್ನಲು ನೀಡಿ. ಈ ರೊಟ್ಟಿಯನ್ನು ನೀವು ಸಾಸಿವೆ ಎಣ್ಣೆಯನ್ನು ಬಳಸಿಕೊಂಡು ತಯಾರಿಸಿದ್ದರೆ ಉತ್ತಮ.
ಶನಿವಾರದ ದಿನದಂದು ಮರೆಯದೇ ಮನೆಯಲ್ಲಿ ಶನಿ ಯಂತ್ರವನ್ನು ಪೂಜಿಸಬೇಕು. ಇದರಿಂದ ನೀವು ಭಗವಾನ್ ಶನಿಯ ಅನುಗ್ರಹವನ್ನು ಪಡೆದುಕೊಳ್ಳಬಹುದು ಹಾಗೂ ಶನಿ ದೋಷದಿಂದ ಮುಕ್ತಿಯನ್ನು ಕಾಣಬಹುದು.
ಶನಿವಾರದಂದು ಒಂದು ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ ಮತ್ತು ಎಣ್ಣೆಯೊಂದಿಗೆ ಆ ಪಾತ್ರೆಯನ್ನು ಕೂಡ ದಾನ ಮಾಡಬೇಕು.
ಶನಿವಾರದಂದು ಸಾಧ್ಯವಾದಷ್ಟು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ.
ಈ ದಿನ ಹನುಮಾನ್ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸಾ ಪಠಿಸಿ
ಶನಿವಾರದಂದು ಭಗವಾನ್ ಹನುಮಂತನಿಗೆ ವೀಳ್ಯದೆಲೆಯನ್ನು ಅರ್ಪಿಸಿ.
ಶನಿವಾರದಂದು ಭಗವಾನ್ ಹನುಮಂತನಿಗೆ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ
ಶನಿವಾರದಂದು ಶಿವನ ಆರಾಧನೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಮರೆಯದೆ ಶಿವ ಪೂಜೆಯನ್ನು ಮಾಡಬೇಕು.
ಸಾಧ್ಯವಾದಷ್ಟು ಬಾರಿ ”ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ” ಎನ್ನುವ ಮಂತ್ರವನ್ನು ಮರೆಯದೇ ಪಠಿಸಿ.
ಶನಿವಾರದಂದು ಕಬ್ಬಿಣದ ವಸ್ತುಗಳು ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬೇಡಿ.
ಶನಿವಾರದಂದು ಎಳ್ಳನ್ನು ತೆಗೆದುಕೊಂಡು ಎಳ್ಳು ಬೆರೆಸಿದ ನೀರಿನಿಂದ ಸ್ನಾನ ಮಾಡಿ.
ಶನಿ ದೇವಸ್ಥಾನಕ್ಕೆ ನೀಲಿ ಬಣ್ಣದ ಅಥವಾ ನೇರಳೆ ಬಣ್ಣದ ಹೂವುಗಳನ್ನು ಅರ್ಪಿಸಿ.
ಶನಿವಾರದಂದು ಪೊರಕೆಗಳನ್ನು ಖರೀದಿಸುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ದಿನ ಪೊರಕೆಯನ್ನು ಮನೆಗೆ ತ