ಮುಂಚೆ ಸ್ಪಿನ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದ ರಾಹುಲ್ ಇದೀಗ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಅಲಭ್ಯರಾಗುವ ಸಾಧ್ಯತೆಗಳಿವೆ.
Pralhad Joshi: ಕಾಂಗ್ರೆಸ್ ಸರ್ಕಾರ ಹಿಂದೂಯೇತರ ಆರೋಪಿಗಳನ್ನೇ ರಕ್ಷಿಸಲು ಕ್ರಮ ಕೈಗೊಳ್ಳುತ್ತಿದೆ: ಜೋಶಿ
ಹೀಗಾಗಿ ರಾಹುಲ್ರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸುವ ಇರಾದೆಯೊಂದಿಗೆ ಬಿಸಿಸಿಐ, ರಾಹುಲ್ರನ್ನು ಆಸ್ಟ್ರೇಲಿಯಾ ಎ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲು ಆಸ್ಟ್ರೇಲಿಯಾಕ್ಕೆ ಕಳುಹಿಸಿತ್ತು. ಆದರೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುವಲ್ಲಿ ಎಡವಿದ ರಾಹುಲ್, ಮೊದಲ ಇನ್ನಿಂಗ್ಸ್ನಲ್ಲಿ 4 ರನ್ಗಳಿಗೆ ಸುಸ್ತಾದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 10 ರನ್ ಬಾರಿಸಲಷ್ಟೇ ಶಕ್ತರಾದರು.
ಆದರಲ್ಲೂ ಎರಡನೇ ಇನ್ನಿಂಗ್ಸ್ನಲ್ಲಿ ರಾಹುಲ್ ವಿಕೆಟ್ ಕಳೆದುಕೊಂಡ ರೀತಿಗೆ ಟೀಂ ಇಂಡಿಯಾ ಫ್ಯಾನ್ಸ್ ಅಚ್ಚರಿಗೊಂಡಿರುವುದಲ್ಲದೆ, ರಾಹುಲ್ಗೆ ಕ್ರಿಕೆಟ್ ಮರೆತು ಹೋಗಿದ್ಯಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಎರಡನೇ ಇನ್ನಿಂಗ್ಸ್ನಲ್ಲಿ ರಾಹುಲ್ ಆಫ್ ಸ್ಪಿನ್ನರ್ ರೋಚಿಸಿಯೋಲಿ ಎಸೆತದಲ್ಲಿ ಬೌಲ್ಡ್ ಆದರು. ರೋಚಿಸಿಯೋಲಿ ಬೌಲ್ ಮಾಡಿದ ತೀರಾ ಸಾಮಾನ್ಯ ಚೆಂಡು ಮಧ್ಯದ ಸ್ಟಂಪ್ನಲ್ಲಿ ಬಿದ್ದು ರಾಹುಲ್ ಕಡೆಗೆ ಹೋಯಿತು. ಆದರೆ ರಾಹುಲ್ ಈ ಚೆಂಡನ್ನು ಬ್ಯಾಟ್ನಲ್ಲಿ ಆಡುವ ಬದಲು, ತನ್ನ ಕಾಲಿನಿಂದ ಆಡಿದರು. ಆ ಬಳಿಕ ಚೆಂಡು, ರಾಹುಲ್ ಅವರ ಕಾಲಿಗೆ ಬಡಿದು ಸ್ಟಂಪ್ಗೆ ಹೋಯಿತು. ಇಷ್ಟು ಸಾಮಾನ್ಯ ಎಸೆತದಲ್ಲಿ ರಾಹುಲ್ ಬೌಲ್ಡ್ ಆಗಿದ್ದು, ಆಸ್ಟ್ರೇಲಿಯಾದ ವೀಕ್ಷಕ ವಿವರಣೆಗಾರರಿಗೂ ಅಚ್ಚರಿ ಮೂಡಿಸಿತು. ರಾಹುಲ್ ಕೂಡ ತುಂಬಾ ನಿರಾಶೆಗೊಂಡಿದಲ್ಲದೆ, ನೋವಿನೊಂದಿಗೆ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು.
ರಾಹುಲ್ ಎರಡನೇ ಇನ್ನಿಂಗ್ಸ್ನಲ್ಲಿ ಔಟಾದ ರೀತಿಯನ್ನು ನೋಡಿದರೆ ಅವರು ದಿನದಾಟವನ್ನು ಹೇಗಾದರೂ ಮಾಡಿ ಮುಗಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿತ್ತು. ಒಂದು ವೇಳೆ ರಾಹುಲ್ ಆಕ್ರಮಣಕಾರಿ ಧೋರಣೆ ಅನುಸರಿಸಿದ್ದರೆ ಹೆಚ್ಚು ರನ್ ಗಳಿಸಬಹುದಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ 44 ಎಸೆತಗಳನ್ನು ಆಡಿದ ರಾಹುಲ್ ಅವರ ಬ್ಯಾಟ್ನಿಂದ ಬಂದಿದ್ದು ಕೇವಲ 10 ರನ್ ಮಾತ್ರ. ರಾಹುಲ್ಗೆ ಎರಡನೇ ಇನ್ನಿಂಗ್ಸ್ನಲ್ಲಿ ಬೌಂಡರಿ ಬಾರಿಸಲೂ ಸಾಧ್ಯವಾಗಲಿಲ್ಲ.