ಬೆಂಗಳೂರು:- ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯ 9 ಬ್ಲಾಕ್ಗಳಲ್ಲಿ ಮೂಲಸೌಕರ್ಯ ಇಲ್ಲದೇ ಜನತೆ ಪರದಾಡುವಂತಾಗಿದೆ. ಹೀಗಾಗಿ ಅಧಿಕಾರಿಗಳನ್ನು ಹೇಳೋರು, ಕೇಳೋರು ಯಾರು ಇಲ್ಲ ಎಂಬಂತಾಗಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯ 9 ಬ್ಲಾಕ್ಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯು ಸೆಪ್ಟೆಂಬರ್ 2023 ರಂದು 14 ತಿಂಗಳುಗಳ ಗಡುವು ವಿಧಿಸಿತ್ತು. ಇದೀಗ ಆ ಗಡುವು ಪೂರ್ಣಗೊಂಡರೂ ಮೂಲಸೌಕರ್ಯಗಳನ್ನು ಇನ್ನೂ ಕಲ್ಪಿಸಲಾಗಿಲ್ಲ ಎಂದು ‘ನಾಡಪ್ರಭು ಕೆಂಪೇಗೌಡ ಲೇಯೌಟ್ ಓಪನ್ ಫೋರಂ’ನ ಜಂಟಿ ಕಾರ್ಯದರ್ಶಿ ಮತ್ತು ವಕ್ತಾರ ಸೂರ್ಯಕಿರಣ್ ಎಎಸ್ ದೂರಿದ್ದಾರೆ.
ಮುಡಾ ಹಗರಣ: ಸಿಎಂ ಎನ್ನುವ ಮೂಲಕ ಸಿಂಪಥಿ ಅಸ್ತ್ರ ಪ್ರಯೋಗಿಸಿದ್ರಾ ಸಿದ್ದರಾಮಯ್ಯ!?
9 ಬ್ಲಾಕ್ಗಳಲ್ಲಿ ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸಲಾಗದೆ ಕೇವಲ ಬಡಾವಣೆಯ ಬ್ಲಾಕ್ 7ರಲ್ಲಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಲ್ಲಿಯ ಕಾಮಗಾರಿಗಳನ್ನು 80 ರಷ್ಟು ಪೂರ್ಣಗೊಳಿಸಿ ಪ್ರಾಧಿಕಾರವು ಅರ್ಜಿ ಸಮಿತಿಯ ಛೀಮಾರಿಯಿಂದದ ತಪ್ಪಿಸಿಕೊಳ್ಳಲು ಸಂಪೂರ್ಣ ಬಡಾವಣೆಯ ಎಲ್ಲಾ ಮೂಲಭೂತ ಸೌಕರ್ಯಗಳು ಪೂರ್ಣಗೊಂಡಿದೆ ಎನ್ನುತ್ತಿದದೆ. ರಸ್ತೆ ಡಾಂಬರಿಕರಣದ ಕಾಮಗಾರಿಯು ಬಹಳಷ್ಟು ಬ್ಲಾಕ್ಗಳಲ್ಲಿ ತ್ವರಿತವಾಗಿ ನಡೆಯುತ್ತಿದೆ ಎಂದು ಬಿಂಬಿಸಲು ಪ್ರಯತ್ನ ಪಡುತ್ತಿದೆ. ಕೇವಲ ಬ್ಲಾಕ್ 7 ರಲ್ಲಿ ಮಾತ್ರ ಎಲ್ಲಾ ರೀತಿಯ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಬ್ಲಾಕ್ 5 ಮತ್ತು 6 ರ ರಸ್ತೆಯ ಕಾಮಗಾರಿಯು ಕುಂಟುತ್ತಾ ಸಾಗಿದೆ. ಅಲ್ಲದೆ ಉಳಿದ 6 ಬ್ಲಾಕ್ ಗಳ ಕಾಮಗಾರಿಗಳು ಪೂರ್ಣಗೊಳ್ಳಲು ಮತ್ತಷ್ಟು ವರ್ಷಗಳು ಬೇಕಾಗುವ ಪರಿಸ್ಥಿತಿ ಇದೆ ಎಂದು ಸೂರ್ಯಕಿರಣ್ ತಿಳಿಸಿದ್ದಾರೆ.,
ರಸ್ತೆ,ವಿದ್ಯುತ್, ನೀರು ಸರಬರಾಜುಗಳ, ಚರಂಡಿ ವ್ಯವಸ್ಥೆಗಳ ಕೊರತೆಯಿಂದಾಗಿ 29,000 ನಿವೇಶನಗಳಲ್ಲಿ ಕೇವಲ 20 ರಿಂದ 30 ಮನೆಗಳ ನಿರ್ಮಾಣವಾಗುತ್ತಿದೆ. ಮನೆ ಕಟ್ಟಲು ಮುಂದೆ ಬರುವವರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಪ್ರಾಧಿಕಾರ ಹೇಳಿಕೊಳ್ಳುತ್ತದೆ. ಆದರೆ ಭರವಸೆಗಳು ಭರವಸೆಯಾಗಿ ಮಾತ್ರ ಉಳಿದಿವೆ ಹಾಗೂ ನಿವೇಶನದಾರರು ಮೂಲಭೂತ ಸೌಕರ್ಯಗಳ ಕೊರತೆಯಲ್ಲಿಯೇ ಮನೆ ಕಟ್ಟಿ ವಾಸಮಾಡಬೇಕಾದ ಪರಿಸ್ಥಿತಿ ಇದೆ ಎಂದು ಅವರು ಆರೋಪಿಸಿದ್ದಾರೆ.