ಬೆಂಗಳೂರು: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿತ್ತು. ದಸರಾ ಹಾಗೂ ದೀಪಾವಳಿ ರಜೆ ಮುಗಿಸಿ ಮಕ್ಕಳು ಶಾಲೆಗೆ ಬರಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಮಕ್ಕಳಿಗೆ ಮತ್ತೆ ರಜೆಗಳು ಬರಲಿದೆ. ಹೌದು ನವೆಂಬರ್ 13ರಿಂದ 18ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಕರ್ನಾಟಕ ರಾಜ್ಯದಲ್ಲಿ 2024ರ ಶೈಕ್ಷಣಿಕ ವರ್ಷದ ಪ್ರಕಾರ ನವೆಂಬರ್ 13ರಂದು ತುಳಸಿ ಪೂಜೆ ಇದೆ.
ಇದಾದ ಬಳಿಕ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಸರ್ಕಾರಿ ರಜೆ ಇರಲಿದೆ. ನಂತರ ನವೆಂಬರ್ 15ರಂದು ಗುರುನಾನಕ್ ಜಯಂತಿ ಇರಲಿದೆ. ಇದಾದ ನಂತರ ನವೆಂಬರ್ 16ರಂದು ಶನಿವಾರ ಕೇವಲ ಅರ್ಧ ದಿನ ಮಾತ್ರ ಶಾಲೆ ನಂತರ ನವೆಂಬರ್ 17ರಂದು ಭಾನುವಾರ ರಜೆ ಇರಲಿದೆ.
Waqf Board: ಏನಿದು ವಕ್ಫ್ ತಿದ್ದುಪಡಿ ಕಾಯ್ದೆ..? ರೈತರಿಗೆ ಹೇಗೆ ತೊಂದರೆಯಾಗುತ್ತದೆ.? ಇಲ್ಲಿದೆ ಸಂಪೂರ್ಣ ಮಾಹಿತಿ
ಜೊತೆಗೆ ನವೆಂಬರ್ 18ರಂದು ಕನಕದಾಸ ಜಯಂತಿ ಆಚರಿಸಲಾಗುತ್ತದೆ. ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ 6 ದಿನ ರಜೆ ಸಿಗಲಿದೆ. ಮಕ್ಕಳಿಗೆ ಇನ್ನುಷ್ಟು ಖುಷಿಯಾಗಲಿದೆ. 2024ರ ಶೈಕ್ಷಣಿಕ ವರ್ಷದ ಪ್ರಕಾರ ಕ್ಯಾಲೆಂಡರ್ʼಗಳಲ್ಲಿ ನೀಡಲಾದ ಮಾಹಿತಿಯನ್ನಷ್ಟೇ ಇಲ್ಲಿ ನೀಡಲಾಗಿದೆ. ಆದರೆ ಈ ರಜೆ ನೀಡುವುದು ಶಿಕ್ಷಣ ಸಂಸ್ಥೆಗಳ ಪರಿಗಣನೆಗೆ ಬಿಟ್ಟಿರುವುದಾಗಿದೆ.