ವಿಜಯಪುರ: ಭಾರತದಲ್ಲಿ ಈಗಲೇ ಒಂದು ಪಾಕಿಸ್ತಾನ ನಿರ್ಮಾಣ ಆಗಿದೆ. ಭಾರತದ ವಕ್ಫ್ ಆಸ್ತಿ ಪಾಕಿಸ್ತಾನದಷ್ಟಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಇನ್ನೊಂದು ಪಾಕಿಸ್ತಾನ ನಿರ್ಮಾಣ ಆಗಿದೆ. ದಿನದಿಂದ ದಿನಕ್ಕೆ ಆಸ್ತಿ ವಕ್ಫ್ ಪಾಲಾಗುತ್ತಿದೆ. ನಾಲಾಯಕ್ ಕಾಂಗ್ರೆಸ್ ಮಾಡಿದ ಕಾನೂನು ಇದಾಗಿದೆ. ವಕ್ಫ್ ವಿರುದ್ಧ ದೊಡ್ಡ ಸಂಗ್ರಾಮ ಆಗಬೇಕಿದೆ. ದೆಹಲಿಯಲ್ಲಿ ಮೌಲ್ವಿ ಚಂದ್ರಬಾಬು ನಾಯ್ಡು, ನಿತೇಶ್ಗೆ ಧಮ್ಕಿ ಹಾಕಿದ್ದಾನೆ. ಬಿಲ್ಗೆ ಬೆಂಬಲ ನೀಡಿದರೆ 5 ಲಕ್ಷ ಜನ ಸೇರಿಸುತ್ತೇನೆ ಎಂದಿದ್ದಾನೆ ಎಂದು ಹೇಳಿದರು.
Storage Tips: ಟೊಮೆಟೊ ಹಾಳಾಗದೆ ಹೆಚ್ಚು ದಿನ ಫ್ರೆಶ್ ಆಗಿ ಇರಲು ಸೂಪರ್ ಟಿಪ್ಸ್ ಇಲ್ಲಿದೆ ನೋಡಿ.!
ಅಂದು ಕುಂಕುಮ ಹಚ್ಚದ ಸಿಎಂ ಈಗ ಕುಂಕುಮ ಹಚ್ಚಿಕೊಳ್ಳುತ್ತಿದ್ದಾನೆ. ಚಾಮುಂಡೇಶ್ವರಿ ಬಳಿ ಹೋಗಿ ಈಗ ಕುಂಕುಮ ಹಚ್ಚಿ ಎನ್ನುತ್ತಿದ್ದಾನೆ. ವಿಜಯಪುರದ ವಾಗ್ದೇವಿ ದೇಗುಲದ ಒಳಗೆ ಸಿಎಂ ಹೋಗಲಿಲ್ಲ. ವಾಗ್ದೇವಿ ಶಾಪದಿಂದಲೇ ಮುಡಾದಲ್ಲಿ ಸಿಎಂ ಸಿಕ್ಕಿಹಾಕಿಕೊಂಡಿದ್ದಾನೆ. ಆದರೆ ವಿಜಯಪುದಲ್ಲಿ ಮತಾಂಧ ಮೌಲ್ವಿ ಮನೆಗೆ ಹಲ್ಲು ಕಿರಿಯುತ್ತಾ ಹೋಗುತ್ತಾನೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.