ಬೆಂಗಳೂರು: ಹಿಂದೂ ಧರ್ಮದಲ್ಲಿ ವಾರದ ಎಲ್ಲಾ ಏಳು ದಿನಗಳು ಯಾವುದಾದರೂ ದೇವರು ಅಥವಾ ದೇವತೆಗೆ ಮೀಸಲಾಗಿವೆ. ಅದೇ ರೀತಿ ಶುಕ್ರವಾರವನ್ನು ಲಕ್ಷ್ಮಿಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಲಕ್ಷ್ಮಿಯನ್ನು ಭಕ್ತಿ ಮತ್ತು ವಿಧಿವಿಧಾನಗಳಿಂದ ಪೂಜಿಸುವ ಮೂಲಕ ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎಂಬುದು ನಂಬಿಕೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಭಕ್ತರು ಶುಕ್ರವಾರ ಉಪವಾಸ ಮತ್ತು ಪೂಜೆ ಮಾಡುತ್ತಾರೆ. ಲಕ್ಷ್ಮಿ ದೇವಿಯು ತನ್ನ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ.
ದೀಪ ಬೆಳಗಿ
ಶುಕ್ರವಾರದ ದಿನದಂದು ಸೂರ್ಯ ಮುಳುಗುತ್ತಿದ್ದಂತೆ ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಅಥವಾ ಬಾಗಿಲಿನ ಬಳಿ ತುಪ್ಪದ ದೀಪವನ್ನು ಹಚ್ಚಿಡಬೇಕು. ನೀವು ಇದನ್ನು ಪ್ರತೀ ಶುಕ್ರವಾರ ಮಾಡುವುದರಿಂದ ಸಾಕ್ಷಾತ್ ಲಕ್ಷ್ಮಿ ದೇವಿಯೇ ನಿಮ್ಮ ಮನೆಗೆ ಆಗಮಿಸುತ್ತಾಳೆ. ಹಾಗೂ ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಕೂಡ ಬಲಗೊಳಿಸುತ್ತದೆ.
ಏಳು ಮುಖದ ದೀಪ
ಇಂದು ಶುಕ್ರವಾರದಂದು ಸೂರ್ಯ ಮುಳುಗಿದ ಕೂಡಲೇ ಏಳು ಮುಖಗಳಿರುವ ದೀಪವನ್ನು ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ಹಚ್ಚಿಡಬೇಕು. ಈ ದೀಪವನ್ನು ಬೆಳಗುವ ಮುನ್ನ ನೀವು ಆ ದೀಪಕ್ಕೆ ಒಂದು ಚಿಟಿಕೆ ಕುಂಕುಮವನ್ನು ಹಾಕಿ ಬೆಳಗಬೇಕು. ಶುಕ್ರವಾರದಂದು ನೀವು ಈ ಕೆಲಸ ಮಾಡುವುದರಿಂದ ಸಂಪತ್ತಿಗೆ ಯಾವುದೇ ರೀತಿಯಾದ ಕೊರತೆ ಉಂಟಾಗುವುದಿಲ್ಲ. ಮತ್ತು ಸಂಪತ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ.
ಲಕ್ಷ್ಮಿ ದೇವಿಗೆ ಆರತಿ ಮಾಡಿ
ಈ ದಿನ ಮುಸ್ಸಂಜೆ ಸಮಯದಲ್ಲಿ ನೀವು ಲಕ್ಷ್ಮಿ ದೇವಿಯನ್ನು ಪೂಜಿಸುವುದರೊಂದಿಗೆ ನೀವು ನಿಮ್ಮ ಕುಟುಂಬದೊಂದಿಗೆ ಸೇರಿಕೊಂಡು ಲಕ್ಷ್ಮಿ ದೇವಿಗೆ ಆರತಿಯನ್ನು ಬೆಳಗಬೇಕು. ಹಾಗೂ ಆರತಿಯನ್ನು ಬೆಳಗಿದ ಬಳಿಕ ಆಕೆಗೆ ಬಿಳಿ ಬಣ್ಣದ ಸಿಹಿಯನ್ನು ಅರ್ಪಿಸಬೇಕು. ಶುಕ್ರವಾರ ಸಂಜೆ ನೀವು ಈ ಕೆಲಸವನ್ನು ಮಾಡುವುದರಿಂದ ಶೀಘ್ರದಲ್ಲೇ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತೀರಿ.
ಗೋಮಾತೆಯ ಸೇವೆ:
ಶುಕ್ರವಾರದ ದಿನದಂದು ಹಸುವಿಗೆ ಪಾಲಕ್, ಬೆಲ್ಲ ಮತ್ತು ಬಾಳೆಹಣ್ಣುಗಳನ್ನು ತಿನ್ನಲು ನೀಡಬೇಕು. ದನದ ಕೊಟ್ಟಿಗೆಗೆ ಹೋಗಿ ಹಸುಗಳ ಸೇವೆ ಮಾಡಿ. ಅನಾರೋಗ್ಯ ಪೀಡಿತರು ಕೂಡ ಹಸುಗಳನ್ನು ದಾನ ಮಾಡಬಹುದು. ಶುದ್ಧ ಬಿಳಿ ಹಸುವಿಗೆ ಪೂರಿ ಮತ್ತು ಬೆಲ್ಲವನ್ನು ನೀಡಿ ತಿಲಕವನ್ನು ಹಚ್ಚಿ. ಹಸುವಿನ ಸೇವೆಯ ಫಲಿತಾಂಶವು ನಿಮಗೆ ಶುಭ ಫಲವನ್ನು ನೀಡುತ್ತದೆ.
ಸಾಲ ನೀಡದಿರಿ
ಗುರುವಾರದಂದು ಮಾತ್ರವಲ್ಲ, ಶುಕ್ರವಾರದ ದಿನವೂ ನೀವು ಹಣದ ವ್ಯವಹಾರಗಳನ್ನು ತಪ್ಪಿಸಬೇಕು. ಈ ದಿನ ಯಾರಿಗೂ ಸಾಲ ನೀಡುವುದನ್ನು ಅಥವಾ ಸಾಲ ಪಡೆದುಕೊಳ್ಳುವುದನ್ನು ತಪ್ಪಿಸಬೇಕು. ವಿಶೇಷವಾಗಿ ಸೂರ್ಯಾಸ್ತದ ನಂತರ, ಯಾರಿಗೂ ಏನನ್ನೂ ಸಾಲ ಮಾಡಬೇಡಿ ಅಥವಾ ಸಾಲ ನೀಡಬೇಡಿ. ಶುಕ್ರವಾರದ ಸಂಜೆ ನೀವು ಈ ಕೆಲಸವನ್ನು ಮಾಡುವುದರಿಂದ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವಿರಿ. ಇದು ನಿಮ್ಮಲ್ಲಿ ಸಾಲ ಸಮಸ್ಯೆಯನ್ನು ಹೆಚ್ಚಾಗಿಸುತ್ತದೆ.
ಕತ್ತಲೆಯಲ್ಲಿ ಇರಬೇಡಿ
ಸೂರ್ಯಾಸ್ತದ ನಂತರ ಮನೆಯ ಯಾವುದೇ ಮೂಲೆಯಲ್ಲಿ ಕತ್ತಲೆ ಇರದಂತೆ ವಿಶೇಷ ಕಾಳಜಿ ವಹಿಸಿ. ಸೂರ್ಯ ಮುಳುಗಿದ ತಕ್ಷಣ, ವಿಶೇಷವಾಗಿ ಮನೆಯ ಮುಖ್ಯ ಬಾಗಿಲು, ಪೂಜಾ ಕೊಠಡಿ, ಅಡುಗೆಮನೆ ಮತ್ತು ಅಂಗಳದಲ್ಲಿ ದೀಪಗಳನ್ನು ಹಚ್ಚಿಡಬೇಕು. ಒಂದು ವೇಳೆ ನೀವು ಈ ಕೆಲಸವನ್ನು ಮಾಡದಿದ್ದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶೀಸುವುದಿಲ್ಲ ಮತ್ತು ನಿಮ್ಮ ಮನೆಯಲ್ಲಿ ದಾರಿದ್ರ್ಯ ಹಾಗೂ ಹಣದ ಸಮಸ್ಯೆ ಎದುರಾಗುವಂತೆ ಮಾಡುತ್ತಾಳೆ.