ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಗಟ್ಟಗಿ ಬಸವೇಶ್ವರ ರಥೋತ್ಸವ ಅದ್ದೂರಿಯಿಂದ ನಡೆಯಿತು. ದೀಪಾವಳಿ ಹಬ್ಬದ ಕಡಿಪಾಡೆ ದಿನದಂದು ನಡೆಯಿತು. ಎರಡು ನೂರು ವರ್ಷಗಳ ಇತಿಹಾಸವಿರುವ ಶ್ರೀ ಬಸವೇಶ್ವರ ರಥೋತ್ಸವ ನವಂಬರ ಆರು ಮತ್ತು ಏಳು ರಂದು ಅತಿ ವಿಜೃಂಭಣೆಯಿಂದ ಆಚರಿಸಿದರು. ರಥೋತ್ಸವದ ಅಂಗವಾಗಿ ನವಂಬರ್ 3 ರಿಂದ ಮೂರು ದಿನಗಳ ಕಾಲ ಪ್ರತಿದಿನ ಸಾಯಂಕಾಲ 6 ಗಂಟೆಗೆ ರಬಕವಿ ಶ್ರೀ ಗುರುದೇವ ಬ್ರಹ್ಮಾನoದ ಆಶ್ರಮದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿಗಳಿಂದ ಪ್ರವಚನ ನಡೆಯಿತು.
ಇದೇ ಸಂದರ್ಭದಲ್ಲಿ ಸಹಾಯ ಸಹಕಾರ ನೀಡಿದ ದಾನಿಗಳಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದರು.ಕಡಿಪಾದ್ಯದಿನ ದಿನಾಂಕ ಆರರಂದು ಪ್ರಾತಃಕಾಲ ಬಸವೇಶ್ವರ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಅಲಂಕೃತ ಪೂಜೆ ಮತ್ತು ಮುತ್ತೈದೆಯರಿಗೆ ಉಡಿತುಂಬು ಕಾರ್ಯಕ್ರಮ ಹಾಗೂ ಅನ್ನಪ್ರಸಾದ ನಡೆಸಿಕೊಟ್ಟರು.
ಸಾಯಂಕಾಲ 6:00 ರಿoದ ಕರಡಿ ಮಜಲು ವಿವಿಧ ಜನಪದ ವಾದ್ಯ ಹಾಗೂ ಡೊಳ್ಳು ಕುಣಿತ ಗೊಂಬೆಕುಣಿತ
ಗಳೊಂದಿಗೆ ಅದ್ದೂರಿಯಿಂದ ರಥೋತ್ಸವ ಜರಗಿತು. ಹಾಗೂ ರಾತ್ರಿ 10 ಗಂಟೆಗೆ ನಾಡಿನ ಪ್ರಸಿದ್ಧ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತ್ತು.
ರಬಕವಿಯ ಶ್ರೀ ಗಟ್ಟಗಿ ಬಸವೇಶ್ವರ ರಥೋತ್ಸವಕ್ಕೆ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ರಬಕವಿಯ ದೈವ ಮಂಡಳಿ ಮತ್ತು ಶ್ರೀ ಗಟ್ಟಗಿ ಬಸವೇಶ್ವರ ಟ್ರಸ್ಟಿನ ಸರ್ವ ಸದಸ್ಯರು ಹಿರಿಯರಿಂದ ಹಾಗೂ ಸಮಸ್ತ ನಾಗರಿಕರಿಂದ ಅಬೂತಪೂರ್ವಕ ಚಾಲನೆ ನೀಡಿದರು.
ದಿನಾಂಕ7ರಂದು ಸಾಯಂಕಾಲ 6:00 ರಿoದ ಮರು ರಥೋತ್ಸವ ನಡೆಯುತ್ತದೆ ಎಂದು ದೇವಸ್ಥಾನದ ಟ್ರಸ್ಟ್ ಸಮಿತಿ ಅಧ್ಯಕ್ಷ ಬಸವರಾಜ ಯಂಡಿಗೇರಿ ತಿಳಿಸಿದ್ದಾರೆ.
ಪ್ರಕಾಶ ಕುಂಬಾರ
ಬಾಗಲಕೋಟೆ