ಹುಬ್ಬಳ್ಳಿ: ಪ್ರಕರಣದ ಆರೋಪದ ಕುರಿತು ತನಿಖೆ ವಿಚಾರದಲ್ಲಿ ಕಾಂಗ್ರೆಸ್ ಗೊಂದು, ಬಿಜೆಪಿ ಗೊಂದು ಕಾನೂನು ಇದೆಯೇ? ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿಗರು ಆರೋಪಕ್ಕೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣದಲ್ಲಿ ಸಿಎಂ ರಾಜಿನಾಮೆ ನೀಡಿ ವಿಚಾರಣೆ ಎದುರಿಸಲಿ ಎಂಬುದು ಬಿಜೆಪಿಗರ ಒತ್ತಾಯವಾದರೆ, ಚುನಾವಣ ಬಾಂಡ್ ಹಗರಣದಲ್ಲಿ ಪ್ರಧಾನಿ ರಾಜೀನಾಮೆ ನೀಡಬೇಕಲ್ಲ ಎಂದು ಪ್ರಶ್ನಿಸಿದರು.16,000 ಕೋಟಿ ಚುನಾವಣಾ ಬಾಂಡ್ ಹರಣದಲ್ಲಿ ಆರೋಪವಲ್ಲ. ಸುಪ್ರೀಂ ಕೋರ್ಟ್ ತನ್ನ ನಿಲುವು ವ್ಯಕ್ತಪಡಿಸಿದೆ.ಇಷ್ಟಾದರು ಪ್ರಧಾನಿ ರಾಜೀನಾಮೆ ನೀಡಿಲ್ಲ.
ಪಿಯುಸಿ ಪಾಸ್ ಆದವರಿಗೆ ಗುಡ್ ನ್ಯೂಸ್: ಕರ್ನಾಟಕ ಲೋಕಾಯುಕ್ತದಲ್ಲಿದೆ ಭರ್ಜರಿ ಉದ್ಯೋಗಾವಕಾಶ – ಇಂದೇ ಅರ್ಜಿ ಸಲ್ಲಿಸಿ
ಇನ್ನು ಮುಡಾ ಹೆಸರಲ್ಲಿ ಸಿಎಂ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗರಿಗೇನಿದೆ. ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆ ಬಗ್ಗೆ ಬಿಜೆಪಿಗರಿಗೆ ಶಂಕೆ ಯಾಕೆ ವ್ಯಕ್ತವಾಗುತ್ತಿದೆ ಗೊತ್ತಿಲ್ಲ. ಸಾವಿರಾರು ಕೋಟಿ ರೂ. ಗಣಿ ಹಗರಣವನ್ನು ಯಶಸ್ವಿ ತನಿಖೆ ನಡೆಸಿದ್ದು ನಮ್ಮ ಲೋಕಾಯುಕ್ತ ಅಲ್ಲವೆ. ಲೋಕಾಯುಕ್ತ ಅಧಿಕಾರಿಗಳ ಮೇಲೆ ಸಿಎಂ ಪ್ರಭಾವ ಬೀರುತ್ತಾರೆ ಎನ್ನುವುದಾದರೆ ಕೇಂದ್ರ ಸಚಿವರ ವಿರುದ್ಧದ ಹಗರಣದ ಬಗ್ಗೆ ಯಾರು ತನಿಖೆ ನಡೆಸಬೇಕು ಎಂದು ಪ್ರಶ್ನಿಸಿದರು.