ದೊಡ್ಡಬಳ್ಳಾಪುರ: ಅವರೆಲ್ಲಾ ಆ ಏರಿಯಾದಲ್ಲಿದ್ದ ಮಹಿಳೆಯ ಬಣ್ಣದ ಮಾತುಗಳ ನಂಬಿ ನಾಲ್ಕೈದು ವರ್ಷಗಳಿಂದ ಚೀಟಿ ಕಟ್ಟುತ್ತಿದ್ದರು. ಬಾಡಿಗೆ ಮನೆಯಲ್ಲಿದ್ದ ಮಹಿಳೆಯ ಚೀಟಿ ವ್ಯವಹಾರಕ್ಕೆ ನೂರಾರು ಜನ ನಂಬಿ ಲಕ್ಷ ಲಕ್ಷ ಚೀಟಿ ಕಟ್ಟಿದ್ದರು. ಆದ್ರೆ ಹಣವನ್ನ ಕೊಡಬೇಕಿದ್ದ ಆ ಮಹಿಳೆ ಚೀಟಿ ಹಣದೊಂದಿಗೆ ಪರಾರಿಯಾಗಿದ್ದು ಕೋಟಿ ಕೋಟಿ ವಂಚನೆ ಆರೋಪ ಕೇಳಿ ಬಂದಿದೆ. ಮೋಸ ಹೋದ ಚೀಟಿದಾರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..
ಈ ಪೋಟೊದಲ್ಲಿ ಕಾಣಿಸ್ತಿರೋ ಈಕೆಯ ಹೆಸರು ಪುಷ್ಪಕಲಾ ಅಂತಾ. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ ಮುಕ್ತಾಂಭಿಕ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಈಕೆ ಇದೀಗ ನೂರಾರು ಜನರ ಬಳಿ ಚೀಟಿ ಹಣ ಕಟ್ಟಿಸಿಕೊಂಡು ಪಂಗನಾಮ ಹಾಕಿ ಎಸ್ಕೆಪ್ ಹಾಗಿರೋ ಆರೋಪ ಕೇಳಿ ಬಂದಿದೆ. ಅಂದಹಾಗೆ ಇಲ್ಲಿನ ಬಡಾವಣೆ ಸುತ್ತಾಮುತ್ತಲಿನ 250 ಕ್ಕೂ ಜನ ಈಕೆಯ ಬಣ್ಣದ ಮಾತುಗಳು ನಂಬಿ ಕಳೆದ ನಾಲ್ಕು ವರ್ಷಗಳಿಂದ ಲಕ್ಷಾಂತರ ರೂ ಚೀಟಿ ಕಟ್ಟಿದ್ದರಂತೆ.
ಜೊತೆಗೆ ನಾಲ್ಕು ವರ್ಷಗಳ ಕಾಲ ಚೀಟಿ ವ್ಯವಹಾರ ನಡೆಸಿದ ಪುಷ್ಪಕಲಾ ಜನರ ನಂಬಿಕೆಯನ್ನ ಗಳಿಸಿದ್ದಾರೆ. ಇದರಿಂದ ನೂರಾರು ಜನ ಮಗಳ ಮದುವೆ, ಮನೆ ಕಟ್ಟಲು, ಬ್ಯೂಸಿನೆಸ್ ಅಂತಾ ದುಡಿದ ಹಣವನ್ನೆಲ್ಲಾ ಪುಷ್ಪಕಲಾ ಬಳಿ ಚೀಟಿ ಹಾಕಿದ್ದಾರೆ. ಆದ್ರೆ ಇದ್ದಕ್ಕಿದ್ದಂತೆ ಚೀಟಿ ಹಣವನ್ನ ಎತ್ತಿಕೊಂಡ ವಂಚಕಿ ಇದೀಗ ನಾಪತ್ತೆಯಾಗಿದ್ದು, ಮೋಸ ಹೋದ ಜನ ವಂಚಕಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಕಳೆದ ತಿಂಗಳು ಅಕ್ಟೋಬರ್ 27 ರಂದು ಗಂಡ ರುದ್ರ ಆರಾಧ್ಯ ಬೇರೆ ಕಡೆ ಎಲ್ಲಿಯೋ ಹೋಗಿದ್ದಾರೆ. ಜೊತೆಗೆ ಈಕೆಯ ಮಕ್ಕಳು ಕಾಲೇಜ್ ಗೆ ಹೋಗಿದ್ದಾರೆ. ಈ ವೇಳೆ ಪುಷ್ಪಕಲಾ ಮನೆಯಿಂದ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಮನೆಯಿಂದ ನಾಪತ್ತೆಯಾದ ಪುಷ್ಪಕಲಾ ಗಂಡನಿಗೆ ವಾಟ್ಸಾಪ್ ನಲ್ಲಿ ಆಡಿಯೋ ಮೆಸೇಜ್ ಕಳಿಸಿದ್ದು, ತನ್ನಗೆ ಯಾರೋ ಮೋಸ ಮಾಡಿದ್ದಾರೆ. ವಿಷ ಕುಡಿದು ಸಾಯುವುದ್ದಾಗಿ ಹೇಳಿದ್ದಾಳಂತೆ. ಗಂಡ ರುದ್ರಆರಾಧ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಂಡತಿ ನಾಪತ್ತೆ ಪ್ರಕರಣ ಕೂಡ ದಾಖಲು ಮಾಡಿದ್ದಾರೆ.
ಆದ್ರೆ ಪುಷ್ಪಕಲಾ ನಾಪತ್ತೆ ಪ್ರಕರಣ ಚೀಟಿದಾರರ ಆತಂಕಕ್ಕೆ ಕಾರಣವಾಗಿದ್ದು, ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಸೇರಿದ ಚೀಟಿದಾರರು ಪುಷ್ಪಕಲಾಳ ವಂಚನೆಯನ್ನ ಬಯಲು ಮಾಡಿದ್ದಾರೆ. ಇನ್ನೂ ನಾಲ್ಕೈದು ಚೀಟಿಗಳ ಹಾಕಿದ್ದೇ, ಚೀಟಿ ಕಂತು ಕಟ್ಟಲು ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಹಣವನ್ನ ಪೋನ್ ಪೇ, ಅಕೌಂಟ್ ಮೂಲಕ ಪಾವತಿ ಮಾಡಿದ್ದೇನೆ, ಆಕೆಯ ವಂಚನೆಯಿಂದ ಸುಮಾರು 35 ಲಕ್ಷ ಹಣವನ್ನ ಕಳೆದುಕೊಂಡಿರೋ ಜನ ಅಳಲನ್ನ ತೋಡಿಕೊಳ್ತಿದ್ದು, ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ಮೆಟಟಿಲೇರಿದ್ದಾರೆ.
ಒಟ್ಟಾರೇ ತಾವು ದುಡಿದ ಹಣವನ್ನ ಉಳಿಸಿ ಮದುವೆ, ಮನೆ ಕಟ್ಟಲು, ಬ್ಯೂಸಿನೆಸ್ ಮಾಡಲು ಆಸೆ ಇಟ್ಟುಕೊಂಡು ಚೀಟಿ ಹಾಕಿದ್ದ ಮಹಿಳೆಯರು, ಕಾರ್ಮಿಕರು ಇದೀಗ ಪುಷ್ಪಕಲಾ ನಾಪತ್ತೆಯಿಂದಾಗಿ ಕಂಗಲಾಗಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಆದಷ್ಟು ಬೇಗ ವಂಚನೆ ಮಾಡಿ ನಾಪತ್ತೆಯಾಗಿರೋ ಪುಷ್ಪಕಲಾ ಹುಡುಕಾಟ ನಡೆಸಿ ಮೋಸ ಹೋದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.
ಮಂಜು ತಿರುಮಗೊಂಡನಹಳ್ಳಿ: ಬೆಂಗಳೂರು ಗ್ರಾಮಾಂತರ