ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮೇಲೆ ದೇವರು ಬರೋದು, ಕಾಮನ್ ಆಗಿ ಬಿಟ್ಟಿದೆ. ಕೂತ ಸ್ಥಳದಲ್ಲಿ, ನಿಂತ ಸ್ಥಳದಲ್ಲಿ ದೇವರು ಬಂತು ಅಂತ ಕಥೆ ಕಡ್ತಾರೆ. ಅಷ್ಟಕ್ಕೂ ಇದು ನಿಜನಾ ದೇವರು ಮನುಷ್ಯನ ಮೈಮೇಲೆ ಬರುತ್ತಾ ಎಂಬ ಪ್ರಶ್ನೆ ನಿಮಗೂ ಇದ್ಯಾ ಹಾಗಿದ್ರೆ ಈ ಸ್ಟೋರಿ ನೋಡಿ!
ಅನೇಕ ಮಂದಿ ತಮ್ಮ ಮೈಮೇಲೆ ದೇವರು ಬಂತು. ಹಾಗೆ ಹೀಗೆ ಎಂದೆಲ್ಲಾ ಹೇಳುತ್ತಾರೆ. ಆದರೆ ಇದು ನಿಜಕ್ಕೂ ನಿಜನಾ ಎಂಬ ಪ್ರಶ್ನೆ ನಿಮ್ಮನ್ನೆಲ್ಲಾ ಕಾಡದೆ ಇರದು.
ಒಂದು ಕಾಲದಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ದೇವತೆಗಳು ಸೇರುವ ದೇವಸ್ಥಾನವಿತ್ತು. ಆದರೆ ಈಗ ಅದು ಕಡಿಮೆಯಾಗುತ್ತಿದೆ. ಹಾಗಾದರೆ, ದೇವರು ಮನುಷ್ಯರ ಮೈಮೇಲೆ ಬರುವುದು ನಿಜವೇ..? ಇದರ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಜೈನ ಧರ್ಮಗ್ರಂಥಗಳು ಯಾವ ವ್ಯಕ್ತಿ ಪುಣ್ಯಾತ್ಮನಾಗಿರುತ್ತಾನೋ ಅವನು ಭಗವಂತನ ಮಾರ್ಗವನ್ನು ಪಡೆದುಕೊಳ್ಳುತ್ತಾನೆ ಎಂದು ಉಲ್ಲೇಖಿಸಲಾಗಿದೆ. ಮುಖ್ಯವಾಗಿ ನಾವು 4 ವಿಧದ ದೇವರನ್ನು ನೋಡಬಹುದು. ಅವುಗಳೆಂದರೆ: ದೇವಾದಿದೇವ, ಸುದೇವ, ಕುದೇವ ಮತ್ತು ಅದೇವ. ದೇವಾದಿದೇವ ಎಂದರೆ ಸರ್ವಜ್ಞ ಮತ್ತು ಹಿತೋಪದೇಶಿ. ಎರಡನೇಯದು ಸುದೇವ ಅಂದರೆ, ಸರಿಯಾದ ಮಾರ್ಗವನ್ನು ತೋರಿಸುವ ದೇವರು. ಮೂರನೇಯದು ಕುದೇವ ಅಂದರೆ, ತಪ್ಪು ದೃಷ್ಟಿಯನ್ನು ಗುರುತಿಸುವವನು. ನಾಲ್ಕನೇಯದು ಅದೇವ ಅಂದರೆ, ದೇವರಲ್ಲದಿದ್ದರೂ ತನ್ನ ಶಕ್ತಿಗಳಿಂದಾಗಿ ದೇವರೆಂದು ಪರಿಗಣಿಸಲ್ಪಟ್ಟಿರುವವನು.
ಇಂದಿಗೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕ್ಷೇತ್ರಪಾಲ, ಖೇಡಪತಿ, ಭೈರವ, ಕಾಳ, ಗ್ರಾಮದೇವತೆ, ಲೋಕದೇವತೆ, ದೇವನಾರಾಯಣ, ದೇವ್ ಮಹಾರಾಜ, ನಾಗದೇವ, ವನಸ್ಪತಿ ದೇವ, ಕುಲ ದೇವ, ಕುಲದೇವಿ ಇತ್ಯಾದಿಗಳನ್ನು ಪೂಜಿಸಲಾಗುತ್ತದೆ. ಇದರೊಂದಿಗೆ ಸತಿ ದೇವಿ, ಕಾಳಿ ದೇವಿ, ವನದೇವಿ, ಪರ್ವತಾದೇವಿ, ವನದುರ್ಗಾ, ಗ್ರಾಮದೇವಿ, ಚಂಡಿ ಮೊದಲಾದ ದೇವತೆಗಳನ್ನೂ ಪೂಜಿಸಲಾಗುತ್ತದೆ. ಈ ದೇವತೆಗಳಿಗೆ ವಿಶೇಷವಾದ ನೈವೇದ್ಯ ಮತ್ತು ಉಡುಗೊರೆಗಳನ್ನು ಅರ್ಪಿಸಲಾಗುತ್ತದೆ. ಕೆಲವೆಡೆ ಕ್ಷೇತ್ರಪಾಲನಿಗೆ ಪ್ರಾಣಿಬಲಿಯನ್ನೂ ನೀಡಲಾಗುತ್ತದೆ
ವೇದಗಳ ಪ್ರಕಾರ, 33 ಮುಖ್ಯ ದೇವರುಗಳು, 36 ತುಷಿತ, 10 ವಿಶ್ವದೇವ, 12 ಸಾಧ್ಯದೇವ, 64 ಆಭಾಸ್ವರ್, 49 ಮರುತ, 220 ಮಹಾರಾಜಿಕ ಹೀಗೆ ಒಟ್ಟು 424 ದೇವರುಗಳು ಮತ್ತು ದೇವತೆಗಳಿವೆ. ದೇವಗಣ ಎಂದರೆ ಅವರಿಗಾಗಿ ಕೆಲಸ ಮಾಡುವ ದೇವರುಗಳ ಆದೇಶ ಪಾಲಕರು. ಗಣಗಳ ಸಂಖ್ಯೆಯು ಅನಂತವಾಗಿದ್ದರೂ, 3 ದೇವರ ಹೊರತಾಗಿ ದೇವತೆಗಳ ಸಂಖ್ಯೆ ಕೇವಲ 33 ಮಾತ್ರ ಇವೆ. ಇದಲ್ಲದೆ, ಮುಖ್ಯ 10 ಅಂಗಿರಸದೇವರು ಮತ್ತು 9 ದೇವಗಣಗಳ ಸಂಖ್ಯೆಯನ್ನು ಸಹ ಉಲ್ಲೇಖಿಸಲಾಗಿದೆ. ಕೆಲವೆಡೆ ಮಹಾರಾಜರ ಸಂಖ್ಯೆಯೂ 236 ಮತ್ತು 226 ಎನ್ನುವ ಉಲ್ಲೇಖವಿದೆ. ಈ ಎಲ್ಲಾ ದೇವರು ಮತ್ತು ದೇವತೆಗಳ ಕಾರ್ಯಗಳು ವಿಭಿನ್ನವಾಗಿರುತ್ತವೆ.
ದೇವರು ಅಥವಾ ದೇವತೆಗಳು ದೇಹದಲ್ಲಿ ಬಂದು ಜನರ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎನ್ನುವ ನಂಬಿಕೆ ಸಾಕಷ್ಟು ಆಸ್ತಿಕರದ್ದು. ಹಿಂದೂ ಪುರಾಣಗಳು ಹಿಮಾಲಯದಲ್ಲಿ ಸೂಕ್ಷ್ಮ ಶರೀರದ ಆತ್ಮಗಳ ಸಂಘವಿದೆ ಎಂದು ಹೇಳುತ್ತದೆ. ಅವರ ಕೇಂದ್ರವು ಹಿಮಾಲಯದ ಕಣಿವೆಗಳಲ್ಲಿವೆ. ಇದನ್ನು ದೇವಾತ್ಮ ಹಿಮಾಲಯ ಎನ್ನುತ್ತಾರೆ. ಸೂಕ್ಷ್ಮ ಶರೀರದ ಆತ್ಮಗಳು ತಮ್ಮ ಉತ್ತಮ ಕಾರ್ಯಗಳಿಗೆ ಅನುಗುಣವಾಗಿ ಇಲ್ಲಿ ಬಂದು ಸೇರುತ್ತವೆ. ಭೂಮಿಯ ಮೇಲೆ ಬಿಕ್ಕಟ್ಟು ಉಂಟಾದಾಗ, ಅವುಗಳು ನೀತಿವಂತ ಮತ್ತು ಉದಾತ್ತ ವ್ಯಕ್ತಿಗಳಿಗೆ ಸಹಾಯ ಮಾಡಲು ಭೂಮಿಗೆ ಬರುತ್ತವೆ ಎನ್ನುವ ನಂಬಿಕೆಯಿದೆ
ಮಾನವನ ದೇಹದ ಮೇಲೆ ದೇವರು ಬರುವುದನ್ನು ಭಾರತದಲ್ಲಿ ದೇವರ ಇರುವಿಕೆ ಎಂದು ಕರೆಯಲಾಗುತ್ತದೆ. ಇದನ್ನು ನಾವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನೋಡಬಹುದು. ಭಾರತದಲ್ಲಿ ಕೆಲವು ಪವಿತ್ರ ಸ್ಥಳಗಳಿದ್ದು, ಅಲ್ಲಿ ದೈವಿಕ ಆತ್ಮವು ಆವಾಹನೆಯ ಮೂಲಕ ನಿರ್ದಿಷ್ಟ ವ್ಯಕ್ತಿಯ ದೇಹವನ್ನು ಆವರಿಸಿಕೊಳ್ಳುತ್ತದೆ ಮತ್ತು ನಂತರ ಅವನು ವಿಶೇಷ ಸ್ಥಳ ಅಥವಾ ಸಿಂಹಾಸನದ ಮೇಲೆ ಕುಳಿತು ಜನರಿಗೆ ಅವರ ಹಿಂದಿನ ಮತ್ತು ಭವಿಷ್ಯವನ್ನು ಹೇಳುತ್ತಾನೆ ಮತ್ತು ಕೆಲವು ಸೂಚನೆಗಳನ್ನು ಸಹ ನೀಡುತ್ತಾನೆ.
ಆದರೆ, ಕೆಲವೊಬ್ಬರು ಇದರಲ್ಲಿ ನಕಲಿ ವೇಷಧಾರಿಗಳೂ ಇರುತ್ತಾರೆ. ಅವರು ಹಣ ಮತ್ತು ಹೆಸರಿಗಾಗಿ ಇಂತಹ ತಪ್ಪು ಕೆಲಸಗಳನ್ನು ಮಾಡುತ್ತಾರೆ. ಇನ್ನು ಕೆಲವರು ಓರ್ವ ವ್ಯಕ್ತಿಯ ಭೂತ ಮತ್ತು ಭವಿಷ್ಯದ ಸನ್ನಿವೇಶಗಳ ಬಗ್ಗೆ ಹೇಳುವುದರ ಮೂಲಕ ತಮ್ಮಲ್ಲಿರುವ ದೈವಿಕ ಶಕ್ತಿಯ ಪ್ರಭಾವವನ್ನು ನಿರೂಪಿಸುತ್ತಾರೆ. ಇದರಲ್ಲಿ ನಾವು ನಕಲಿ ಅಥವಾ ಅಸಲಿಯನ್ನು ಕಂಡು ಹಿಡಿಯುವುದು ಸ್ವಲ್ಪ ಕಷ್ಟವೆ. ದೈವಿಕ ಶಕ್ತಿಯುಳ್ಳ ಜನರು ಯಾವುದೇ ವ್ಯಕ್ತಿಯ ಜೀವನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.