ದಾವಣಗೆರೆ: ಇದ್ದಕ್ಕಿದ್ದಂತೆ ದೇವಾಲಯಗಳು ವಕ್ಫ್ ಆಸ್ತಿಯಾಗಿದ್ದು ಹೇಗೆ ಎಂದು ಪೇಜಾವರ ಶ್ರೀಗಳು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ದೇವಾಲಯಗಳು ಇದ್ದಕ್ಕಿದ್ದಂತೆ ವಕ್ಫ್ ಆಸ್ತಿಯಾಗುತ್ತಿವೆ. ಜನರಿಗೆ ಇಷ್ಟು ಭಯ ಹಾಗೂ ಗೊಂದಲ ಉಂಟುಮಾಡುವ ಕೆಲಸ ಮಾಡಬಾರದು. ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ರೈತರ ಜಮೀನು, ಮಠಗಳ ಆಸ್ತಿಯಲ್ಲಿ ವಕ್ಫ್ ಹೆಸರು ಕಾಣಿಸಿಕೊಳ್ಳುತ್ತಿದೆ. ನಮ್ಮಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಡಿ ಅನೇಕ ದೇವಾಲಯಗಳಿವೆ. ಮೊದಲು ಅವುಗಳ ಆಸ್ತಿ ರಕ್ಷಣೆಗೆ ಮುಂದಾಗಬೇಕು. ದೇವಸ್ಥಾನದ ಆಸ್ತಿಗಳನ್ನು ದೇವರ ಹೆಸರಿನಲ್ಲಿ ನೋಂದಣಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆಯರೇ “ಸೆಕ್ಸ್” ವೇಳೆ ನಿಮಗೆ ಸಿಕ್ಕಾಪಟ್ಟೆ ನೋವಾಗುತ್ತಾ..? ಕಡಿಮೆ ಮಾಡೋ ಟಿಪ್ಸ್ ಇಲ್ಲಿದೆ ನೋಡಿ
ನಾವು ನಮ್ಮ ದೇಶ ಎಂದು ತಿಳಿದು ಸಹ ಇಷ್ಟು ದಿನ ಸುಮ್ಮನೇ ಇದ್ದೇವೆ. ಅದ್ದರಿಂದ ಹಂತಹಂತವಾಗಿ ಆಸ್ತಿ ಪರಭಾರೆಯಾಗುತ್ತಿದೆ. ಹಾಸನದಲ್ಲಿ ಈಗ ದೇವಸ್ಥಾನದ ಆಸ್ತಿಯನ್ನು ದೇವರ ಹೆಸರಿಗೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅದೇ ರೀತಿ ಎಲ್ಲಾ ಕಡೆ ಮಾಡಬೇಕು. ಪರಭಾರೆ ಮಾಡಿ ಕೊಡುವ ಕೆಲಸ ಯಾರು ಮಾಡಿದ್ದು ಏಕೆ ಮಾಡಿದ್ದು ಎಂದು ತಿಳಿಯಬೇಕು. ಈ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.