ಬ್ಯಾಂಕ್ನಲ್ಲಿ ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕರ್ನಾಟಕದಲ್ಲೂ ಪೋಸ್ಟ್ಗಳು ಖಾಲಿ ಖಾಲಿ ಇವೆ. ಹೀಗಾಗಿ ಆಸಕ್ತರು ಕೂಡಲೇ ಅಪ್ಲೈ ಮಾಡಿ. ಅರ್ಜಿಯನ್ನು ಇನ್ನೂ 1 ವಾರದೊಳಗೆ ಸಲ್ಲಿಸಬೇಕಾಗಿದೆ.
ಮತ್ತೆ ವಿಚಾರಣೆಗೆ ಬರಲು ಲೋಕಾಯುಕ್ತ ಅಧಿಕಾರಿಗಳು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ
ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ದೇಶದ ವಿವಿಧ ಭಾಗಗಳಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಅನ್ನು ಆಹ್ವಾನ ಮಾಡಲಾಗಿದೆ. ಕರ್ನಾಟಕದಲ್ಲೂ ಈ ಬ್ಯಾಂಕ್ನ ಬ್ರ್ಯಾಂಚ್ಗಳಿದ್ದು ಇಲ್ಲಿಯು ಉದ್ಯೋಗಗಳು ಖಾಲಿ ಇವೆ. ಹೀಗಾಗಿ ಕರ್ನಾಟಕದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ವಿವಿಧ ಪ್ರದೇಶ ಬಿಟ್ಟು ಕರ್ನಾಕದಲ್ಲಿ ಮಾತ್ರ 300 ಉದ್ಯೋಗಗಳು ಖಾಲಿ ಇವೆ. ಎಸ್ಸಿ 45, ಎಸ್ಟಿ 22, ಒಬಿಸಿ 81, ಎಡಬ್ಲುಎಸ್ 30, ಯುಆರ್ 122 ಉದ್ಯೋಗಗಳು ಮೀಸಲು ಇವೆ. ಅ.23 ರಂದು ಬ್ಯಾಂಕ್ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಆನ್ಲೈನ್ ನೋಂದಣಿ, ಕೊನೆ ದಿನಾಂಕ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಹೇಗೆಲ್ಲಾ ಇರಲಿದೆ ಎಂಬುದು ಇಲ್ಲಿದೆ.
ಉದ್ಯೋಗದ ಹೆಸರು ಹಾಗೂ ಎಷ್ಟು ಇವೆ?
ಲೋಕಲ್ ಬ್ಯಾಂಕ್ ಆಫೀಸರ್ (ಎಲ್ಬಿಒ)
ಒಟ್ಟು ಹುದ್ದೆಗಳು- 1,500
ಅರ್ಜಿಗೆ ಪಾವತಿಸಬೇಕಾದ ಶುಲ್ಕ?
ಜನರಲ್, ಇಡಬ್ಲುಎಸ್, ಒಬಿಸಿ- 850 ರೂ.ಗಳು
ಎಸ್ಸಿ, ಎಸ್ಟಿ, ಅಂಗ ವಿಕಲರು- 175 ರೂ.ಗಳು
ವಯೋಮಿತಿ- 20- 30 ವರ್ಷ
ಶೈಕ್ಷಣಿಕ ಅರ್ಹತೆ ಏನು ಕೇಳಿದ್ದಾರೆ?
ಯಾವುದೇ ವಿಷಯದಲ್ಲಿ ಪದವಿ
ಹೇಗೆ ಆಯ್ಕೆ ಮಾಡಲಾಗುತ್ತದೆ?
ಲಿಖಿತ ಪರೀಕ್ಷೆ (ಆನ್ಲೈನ್)
ಗುಂಪು ಚರ್ಚೆ
ಇಂಟರ್ವ್ಯೂವ್
ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್ಪಿಟಿ)
ದಾಖಲಾತಿ ಪರಿಶೀಲನೆ
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 13 ನವೆಂಬರ್ 2024