ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ಇಂದು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವ ಕುರಿತು ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂಗೆ ನಿರ್ದಿಷ್ಟವಾಗಿ ಕೆಲವು ಪ್ರಶ್ನೆ ಕೇಳಲು ದೂರುದಾರನಾಗಿ ನಾನು ಒಂದು ಮನವಿಯನ್ನು ಲೋಕಾಯುಕ್ತರಿಗೆ ಕೊಟ್ಟಿದ್ದೇನೆ.
Driving License ಕಳೆದು ಹೋಗಿದ್ಯಾ.? ಹಾಗಿದ್ರೆ ಮರಳಿ ಪಡೆಯಲು ಹೀಗೆ ಮಾಡಿ ಸಾಕು
ತನಿಖಾಧಿಕಾರಿ ಆ ಪ್ರಶ್ನೆಗಳನ್ನು ಆರೋಪಿ ಸ್ಥಾನದಲ್ಲಿ ಇರುವವರಿಗೆ ಕೇಳಬೇಕು. ಕೇಳದೆ ಇದ್ದರೆ ವಿಚಾರಣೆ ಪರಿಪೂರ್ಣ ಆಗಲ್ಲ. ಒಂದು ವೇಳೆ ಅವರು ಪ್ರಶ್ನೆ ಕೇಳದೆ ಇದ್ದರೆ ಲೋಕಾಯುಕ್ತ ತನಿಖಾಧಿಕಾರಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದರು. ಇವತ್ತಿನ ವಿಚಾರಣೆ ವೇಳೆ ಸಿದ್ದರಾಮಯ್ಯ ಅವರು ಸಿಎಂ ಅಲ್ಲ. ಒಬ್ಬ ಆರೋಪಿ ಅಷ್ಟೇ. ಇದನ್ನು ತನಿಖಾಧಿಕಾರಿ ಮರೆಯಬಾರದು ಎಂದು ಹೇಳಿದರು.