ಇಂಡೋ-ಕಿವೀಸ್ ಟೆಸ್ಟ್ ಸರಣಿ ವೈಟ್ವಾಶ್ನ ಬಳಿಕ ಮುಂಬರುವ ಆಸ್ಟ್ರೇಲಿಯಾ ಪ್ರವಾಸ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ. ಕಳೆದ 2 ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸರಣಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ನ್ಯೂಜಿಲೆಂಡ್ ವಿರುದ್ಧ ವೈಟ್ವಾಷ್ ಮುಖಭಂಗ ಅನುಭವಿಸಿರೋದ್ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಎಂಟ್ರಿ ಕೊಡಬೇಕಂದ್ರೆ ಸರಣಿ ಗೆಲುವು ಅನಿವಾರ್ಯ ಆಗಿದೆ. ಈ ಪ್ರತಿಷ್ಠೆಯ ಸರಣಿಗೆ ಸಿದ್ಧತೆಗಳು ಆರಂಭವಾಗಿದೆ.
Bank Recruitment: ಯೂನಿಯನ್ ಬ್ಯಾಂಕ್ʼನಲ್ಲಿದೆ ಭರ್ಜರಿ ಉದ್ಯೋಗಾವಕಾಶ.! ಡಿಗ್ರಿ ಪಾಸಾದವರಿಗೆ ₹ 85,000 ಸಂಬಳ
ಮುಂಬರೋ ಪ್ರತಿಷ್ಟಿತ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ವಲಯದಲ್ಲಿ ಸಿದ್ಧತೆಗಳು ಜೋರಾಗಿವೆ. ಈಗಾಗಲೇ ಬಾರ್ಡರ್ -ಗವಾಸ್ಕರ್ ಟೂರ್ನಿಗೆ ತಂಡವನ್ನೂ ಪ್ರಕಟಿಸಲಾಗಿದೆ. ನವೆಂಬರ್ 22ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಇಂಡಿಯಾ ಎ ಜೊತೆಗೆ ಒಂದು ಅಭ್ಯಾಸ ಪಂದ್ಯ ಆಡೋದು ಇಷ್ಟು ದಿನ ಇದ್ದ ಪ್ಲಾನ್ ಆಗಿತ್ತು. ಆದ್ರೆ, ಇದಕ್ಕಿದ್ದಂತೆ ಕೋಚ್ ಗೌತಮ್ ಗಂಭೀರ್, ಕ್ಯಾಪ್ಟನ್ ರೋಹಿತ್ ಶರ್ಮಾ ಆ ಪ್ಲಾನ್ ರಿಜೆಕ್ಟ್ ಮಾಡಿದ್ದಾರೆ
ಮೊದಲಿದ್ದ ಪ್ಲಾನ್ನಂತೆ ನವೆಂಬರ್ 15ರಿಂದ ಟೀಮ್ ಇಂಡಿಯಾ ಪರ್ತ್ ಸ್ಟೇಡಿಯಂನಲ್ಲಿ ಇಂಡಿಯಾ ಎ ವಿರುದ್ಧ ಪ್ರಾಕ್ಟಿಸ್ ಗೇಮ್ ಆಡಿ ಸರಣಿಗೆ ಸಿದ್ಧತೆ ನಡೆಸಲು ತೀರ್ಮಾನಿಸಿತ್ತು. ಅಸಲಿಗೆ ಈ ಐಡಿಯಾ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಬಿಸಿಸಿಐಗೆ ನೀಡಿದ್ದು, ವಿರಾಟ್ ಕೊಹ್ಲಿ. ಕಳೆದ 2 ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾವು ಕಾಂಗರೂ ನಾಡಿಗೆ ಕಾಲಿಟ್ಟ ಬೆನ್ನಲ್ಲೇ ಪ್ರಾಕ್ಟಿಸ್ ಗೇಮ್ ಆಡಿದ್ವಿ. ಇದು ಸರಣಿ ಗೆಲುವಿಗೆ ಸಹಾಯ ಮಾಡಿತ್ತು. ಈ ಬಾರಿಯೂ ಅದೇ ಪ್ಲಾನ್ ಮುಂದುವರೆಸುವಂತೆ ಕೊಹ್ಲಿ ಸಲಹೆ ನೀಡಿದ್ರಂತೆ. ಇದಕ್ಕೆ ಅಸ್ತು ಎಂದಿದ್ದ ಬಿಸಿಸಿಐ ಎಲ್ಲಾ ಸಿದ್ಧತೆ ಮಾಡಿತ್ತು. ಆದ್ರೆ, ಇದೀಗ ಗಂಭೀರ್ ಹಾಗೂ ರೋಹಿತ್ ಆ ಪ್ಲಾನ್ನ ರಿಜೆಕ್ಟ್ ಮಾಡಿ, ಪ್ರಾಕ್ಟಿಸ್ ಗೇಮ್ನ ಕ್ಯಾನ್ಸಲ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ನೀಡಿದ ಸಲಹೆಯನ್ನ ರಿಜೆಕ್ಟ್ ಮಾಡಿರುವ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ಹೊಸ ಪ್ಲಾನ್ ರೂಪಿಸಿದ್ದಾರೆ. ಪರ್ತ್ ಸ್ಟೇಡಿಯಂನಲ್ಲೇ ಅಭ್ಯಾಸ ಪಂದ್ಯದ ಬದಲು ಸೆಂಟರ್ ಪಿಚ್ನಲ್ಲಿ ಪ್ರಾಕ್ಟಿಸ್ ನಡೆಸಲು ತೀರ್ಮಾನಿಸಿದ್ದಾರೆ. ಪ್ರಾಕ್ಟಿಸ್ ಗೇಮ್ ಆಡಿದ್ರೆ, ಎಲ್ಲಾ ಆಟಗಾರರಿಗೂ ಹೆಚ್ಚಿನ ಅವಕಾಶ ಸಿಗಲ್ಲ. ನೆಟ್ ಸೆಷನ್ನಲ್ಲಾದ್ರೆ, ಬ್ಯಾಟಿಂಗ್ ಅಥವಾ ಬೌಲಿಂಗ್ಗೆ ಹೆಚ್ಚು ಅವಕಾಶ ಸಿಗಲಿದೆ. ಅದ್ರಲ್ಲೂ, ಸೆಂಟರ್ ಪಿಚ್ನಲ್ಲಿ ಅಭ್ಯಾಸ ನಡೆಸಿದ್ರೆ, ಸಿದ್ಧತೆಗೆ ಹೆಚ್ಚು ಅನುಕೂಲವಾಗುತ್ತೆ ಅನ್ನೋದು ಕೋಚ್-ಕ್ಯಾಪ್ಟನ್ ಲೆಕ್ಕಾಚಾರವಾಗಿದೆ.