ರಾಯಚೂರು: ನನ್ನ ಇಡೀ ಜೀವನದಲ್ಲಿ ಇಂತಹ ಪ್ರಧಾನಿಯನ್ನು ನೋಡಿರಲಿಲ್ಲ. ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ಮೋದಿನೇ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಕಿಡಿಕಾರಿದರು. ರಾಯಚೂರಿನಲ್ಲಿ ಮಾತನಾಡಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಗ್ಯಾರಂಟಿಗಳು ನಡೆಯುವುದೇ ಇಲ್ಲ ಎಂದಿದ್ದರು.
Dolo 650: ಸಣ್ಣ-ಪುಟ್ಟ ರೋಗಕ್ಕೆಲ್ಲಾ “ಡೋಲೋ 650” ಮಾತ್ರೆ ನುಂಗುವ ಮುನ್ನ ಎಚ್ಚರ! ಈ ಸ್ಟೋರಿ ನೋಡಿ
ಆದರೆ ಈಗ ಅವರೇ ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡಿದರು. ಅವರ ಆಡಳಿತ ಇರುವ ಮಧ್ಯಪ್ರದೇಶದಲ್ಲಿ 1,200 ರೂ. ಕೊಡುತ್ತಿದ್ದಾರೆ. ಚುನಾವಣೆ ವೇಳೆ ಏನಾದರೂ ಒಂದು ಭಾಷಣ ಮಾಡಿಬಿಡುವುದು ಮೋದಿಯವರ ಒಂದು ಕಲೆಯಾಗಿದೆ. ಅದಕ್ಕೆ ತಿರುಳು ಇರಲ್ಲ. ಇಂತಹ ಪ್ರಧಾನ ಮಂತ್ರಿಯನ್ನು ನಾನಂತು ನನ್ನ ಜೀವನದಲ್ಲಿ ನೋಡಿರಲಿಲ್ಲ. ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ಮೋದಿನೇ ಎಂದು ಹೇಳಿದರು.